ಕೊಡಗು: ಗ್ರಾಮ ಪಂಚಾಯತಿ ಸದಸ್ಯನ ಮನೆ ಗೋಡೆ ಕುಸಿತ

Prasthutha|

ಮಡಿಕೇರಿ: ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮ ಪಂಚಾಯತಿ ಸದಸ್ಯನ ಮನೆ ಗೋಡೆ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

- Advertisement -

ಕೂಡುಮಂಗಳೂರು ಗ್ರಾಮ ಪಂಚಾಯತಿ ಸದಸ್ಯ ಕೆ.ಬಿ ಶಂಶುದ್ಧೀನ್ ಅವರ ಮನೆಯ ಗೋಡೆ ಇಂದು ಬೆಳಗಿನ ಜಾವ ಕುಸಿದು ಬಿದ್ದಿದೆ. ಅದೃಷ್ಟವಷಾತ್ ಮನೆಯಲ್ಲಿದ್ದವರು ಪ್ರಾಣಾಪಾಯಾದಿಂದ ಪಾರಾಗಿದ್ದಾರೆ. ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಜಖಂಗೊಂಡಿದೆ.

ತನ್ನ ವಾರ್ಡಿನ‌ ಜನರ ಮನೆಗಳಿಗೆ ಹಾನಿಯಾದಾಗ, ಪರಿಹಾರ ಕೊಡಿಸುತ್ತಿದ್ದ ಸದಸ್ಯನ ಮನೆ ಹಾನಿಯಾಗಿರುವುದು ಬೇಸರದ ಸಂಗತಿ. ಸರ್ಕಾರ ಇವರಿಗೆ ಸೂಕ್ತ ಪರಿಹಾರ ಒದಗಿಸಬೇಕಾಗಿದೆ ಎಂದು ವಾರ್ಡಿನ ಜನತೆ ಆಗ್ರಹಿಸಿದ್ದಾರೆ.



Join Whatsapp