ಆತ್ಮರಕ್ಷಣೆ ಮಾಡಿಕೊಳ್ಳಬಹುದು ಎಂದು ಸಂವಿಧಾನವೇ ಹೇಳಿದೆ; ಹಿಂದೂಗಳು ಶಸ್ತ್ರ ಹಿಡಿದು ರಕ್ಷಣೆ ಪಡೆಯಿರಿ ಎಂದ ಸಂತೋಷ್ ಗುರು

Prasthutha|

ಶಿವಮೊಗ್ಗ: ಸಾವರ್ಕರ್ ಫೋಟೋ ವಿವಾದದ ಗಲಭೆಯಲ್ಲಿ ಚಾಕು ಇರಿತದಿಂದ ಗಾಯಗೊಂಡು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರೇಮ್ ಸಿಂಗ್ ಆರೋಗ್ಯವನ್ನು ಸಂತೋಷ್ ಗುರು ವಿಚಾರಿಸಿದ್ದಾರೆ.

- Advertisement -

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆತ್ಮರಕ್ಷಣೆ ಮಾಡಿಕೊಳ್ಳಬಹುದು ಎಂದು ಸಂವಿಧಾನವೇ ಹೇಳಿದೆ. ಹಿಂದೂ ಯುವಕರು ಇನ್ನು ಮುಂದೆ ಶಸ್ತ್ರಗಳನ್ನು ಇಟ್ಟುಕೊಂಡು ಓಡಾಡಬೇಕು. ನಗರದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ. ಮಂಗಳೂರು ಮಾದರಿಯನ್ನು ಶಿವಮೊಗ್ಗ ಯುವಕರು ಅನುಸರಿಸಬೇಕಿದೆ ಎಂದರು.

ಬಾವುಟ ಕಟ್ಟೋದು, ಫ್ಲೆಕ್ಸ್ ಹಾಕುವುದು ನಂತರ ಸಾಯೋದು ತಪ್ಪಬೇಕಿದೆ. ಆತ್ಮ ರಕ್ಷಣೆಗಾಗಿ ಸರ್ಕಾರಗಳನ್ನು ಕಾಯುವುದು ತರವಲ್ಲ. ಆತ್ಮರಕ್ಷಣೆ ಮಾಡಿಕೊಳ್ಳಬಹುದು ಎಂದು ಸಂವಿಧಾನವೇ ಹೇಳಿದೆ. ಯಾವುದೇ ಸರ್ಕಾರವಾದರೂ ಹಿಂದೂಗಳ ರಕ್ಷಣೆ ಮಾಡುವವರನ್ನು ಬೆಂಬಲಿಸಿ ಎಂದು ಸ್ವಾಮೀಜಿ ಹೇಳಿದರು.

- Advertisement -

ಈ ಪ್ರಕರಣದಲ್ಲಿ ಶಿವಮೊಗ್ಗದ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ದಕ್ಷ ಎಸ್ ಸಿ ಮತ್ತು ಡಿಸಿ ಜಿಲ್ಲೆಯಲ್ಲಿದ್ದಾರೆ. ಹಿಂದೂಗಳು ಅನಿವಾರ್ಯವಾಗಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕಿದೆ. ಅದಕ್ಕಾಗಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡು ಓಡಾಟ ಮಾಡುವುದು ಅನಿವಾರ್ಯ. ಶಿವಮೊಗ್ಗದಲ್ಲಿ ಮುಂದಿನ 10 ವರ್ಷಗಳ ನಂತರ ಹಿಂದೂಗಳ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಅವರು ಭವಿಷ್ಯ ನುಡಿದರು.



Join Whatsapp