ಬಾಗಲಕೋಟೆ: ಸ್ವಾತಂತ್ರ್ಯ ದಿನಾಚರಣೆಯಂದೇ ವಿಚಾರಣಾಧೀನ ಖೈದಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಕೋಟೆ ಜೈಲಿನಲ್ಲಿ ನಡೆದಿದೆ.
ಮಂಜುನಾಥ್ ಕುರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕಳೆದ ಮಾರ್ಚ್ ನಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಲೋಕಾಪುರ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದ್ದ ಮಂಜುನಾಥ್, ವಿಚಾರಣಾದೀನ ಖೈದಿಯಾಗಿ ಜೈಲು ಸೇರಿದ್ದ.
ಜೈಲು ಅಧಿಕಾರಿಗಳು ಹಾಗೂ ಸಹ ಖೈದಿಗಳು ಸ್ವಾತಂತ್ರ್ಯ ಅಮೃತಮಹೋತ್ಸದ ಕಾರ್ಯಕ್ರಮದಲ್ಲಿದ್ದ ವೇಳೆ ಮೂತ್ರ ವಿಸರ್ಜನೆಗೆಂದು ಹೋದ ಮಂಜುನಾಥ್ ಟಾಯ್ಲೆಟ್ ನ ಕಿಟಕಿಗೆ ಟವಲ್ನಿಂದ ಬಿಗಿದುಕೊಂಡು ನೇಣು ಹಾಕಿಕೊಂಡಿದ್ದಾನೆ.
ತಕ್ಷಣವೇ ಜೈಲು ಅಧಿಕಾರಿಗಳು ಮುಂಜುನಾಥನನ್ನು ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಮಂಜುನಾಥನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಕುಟುಂಬಸ್ಥರು ಆತನ ಸಾವಿಗೆ ಜೈಲರ್ಗಳ ಬೇಜವಾಬ್ದಾರಿಯೇ ಕಾರಣ. ಆದ್ದರಿಂದ , ಅವರನ್ನ ಸಸ್ಪೆಂಡ್ ಮಾಡಬೇಕು. ಸೂಕ್ತ ತನಿಖೆ ನಡೆಸಿ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.