ಬೆಂಗಳೂರು: ನಗರದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಬ್ರಿಟಿಷರೊಂದಿಗೆ ಕ್ಷಮೆಯಾಚಿಸಿದ ಸಾವರ್ಕರ್ ಭಾವಚಿತ್ರವನ್ನು ಬೆಂಗಳೂರು ಮೆಟ್ರೋ ನಿಗಮ ಪ್ರದರ್ಶಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಚಂದ್ರಶೇಖರ್ ಆಜಾದ್ ಮತ್ತು ಸರ್ದಾರ್ ಉಧಮ್ ಸಿಂಗ್ ಇರುವ ಭಾವಚಿತ್ರದಲ್ಲಿ ಸಾವರ್ಕರ್ ಚಿತ್ರವೂ ಎದ್ದು ಕಾಣುತ್ತದೆ. ಮೆಟ್ರೋ ನಿಗಮದ ಈ ನಡೆಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಆರಂಭವಾಗಿದೆ. ಮೆಟ್ರೋ ನಿಗಮದ ನಡೆಯನ್ನು ಪ್ರಶ್ನಿಸಿರುವ ‘ಬಹುತ್ವ ಕರ್ನಾಟಕ’ ಟ್ವಿಟರ್ ಪುಟವು, ‘ಹಲೊ, ಬೆಂಗಳೂರು ಮೆಟ್ರೋ ಅಧಿಕಾರಿಗಳೇ. ಯಾಕೆ ಸ್ವಾಮಿ ಸಾವರ್ಕರ್ ಚಿತ್ರ? ಅವರ ಕೊಡುಗೆಯೇನು? ಬ್ರಿಟಿಷರಿಗೆ ಕ್ಷಮೆ ಕೇಳಿದವರನ್ನು ನಾವೇಕೆ ಗೌರವಿಸಬೇಕು? ನಿಮಗೆ ಬೇರೆ ಯಾರೂ ಸಿಕ್ಕಿಲ್ಲವೇ? ಯಾರ ಆದೇಶ ಇದು’ ಎಂದು ಕೇಳಿದೆ.