“ನೀನು ಸುಮ್ಮನಿದ್ದರೆ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ”: ಕಾರ್ಯಕ್ರಮ ನಿರೂಪಕಿ ಮೇಲೆ ಗರಂ ಆದ ಸಿಎಂ ಬೊಮ್ಮಾಯಿ

Prasthutha|

ಬೆಂಗಳೂರು: ಕಾರ್ಯಕ್ರಮದ ನಿರೂಪಕಿ ಮೇಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗರಂ ಆದ ಘಟನೆ ಬಿಜೆಪಿಯ ಅಮೃತ ಭಾರತಿಗೆ ಕುರುನಾಡ ಜಾತ್ರೆ ಕಾರ್ಯಕ್ರಮದಲ್ಲಿ ನಿನ್ನೆ ನಡೆದಿದೆ.

- Advertisement -


ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಿನ್ನೆ ಬಿಜೆಪಿಯ ಅಮೃತ ಭಾರತಿಗೆ ಕುರುನಾಡ ಜಾತ್ರೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಿಎಂ ಭಾಷಣ ಮುಗಿಯುತ್ತಿದ್ದಂತೆ ಜನರು ಎದ್ದು ಹೊರಡಲು ಆರಂಭಿಸುತ್ತಾರೆ. ಈ ವೇಳೆ ನಿರೂಪಕಿ ಪ್ರತಿಭಾ ಅವರು ಎಲ್ಲರೂ ಚಪ್ಪಾಳೆ ತಟ್ಟಿ ಕಾರ್ಯಕ್ರಮವನ್ನು ಹುರಿದುಂಬಿಸಬೇಕು. ಯಾರೂ ಕೂಡ ಹೋಗಬೇಡಿ ಎಂದಿದ್ದಾರೆ. ಇದರಿಂದ ಸಿಟ್ಟಾದ ಸಿಎಂ ಈಗ ನೀವು ಸುಮ್ಮನಿದ್ದರೆ ಆರೋಗ್ಯಕ್ಕೆ ಒಳ್ಳೆಯದು ಹೇಳಿದ್ದಾರೆ.


ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಿಎಂಗೆ ಬಿ ಪಿ ಜಾಸ್ತಿಯಾಗಿದೆ ಎಂದು ಸಾರ್ವಜನಿಕರು ಟ್ರೋಲ್ ಮಾಡುತ್ತಿದ್ದಾರೆ.



Join Whatsapp