‘ಹರ್ ಘರ್ ತಿರಂಗ’ ಪರಿಣಾಮ; ಚರಂಡಿಯಲ್ಲಿ ದೊರಕಿದ ರಾಷ್ಟ್ರ ಧ್ವಜ

Prasthutha|

ಚಿಕ್ಕಮಗಳೂರು: ರಾಷ್ಟ್ರ ಧ್ವಜವೊಂದು ಚರಂಡಿಯಲ್ಲಿ ದೊರೆತ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಪಟ್ಟಣದಲ್ಲಿ ನಡೆದಿದೆ.

- Advertisement -


ದೇಶಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯ ಖುಷಿಯಲ್ಲಿದೆ. ದೃಷ್ಟಿ ಹಾಯಿಸುವಲ್ಲೆಲ್ಲಾ ತಿರಂಗಾಗಳೇ ರಾರಾಜಿಸುತ್ತಿವೆ. ಆದರೆ ವಿಕೃತ ಮನಸ್ಸಿನ ಕೆಲ ಕಿಡಿಗೇಡಿಗಳು ತ್ರಿವರ್ಣ ಧ್ವಜವನ್ನು ಚರಂಡಿಗೆ ಎಸೆದು ಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎನ್ನಲಾಗುತ್ತಿದೆ.


ಬಣಕಲ್ ಪಟ್ಟಣದ ಚರಂಡಿಯಲ್ಲಿ ತ್ರಿವರ್ಣಧ್ವಜ ದೊರೆತಿದ್ದು, ಯಾರೋ ಕಿಡಿಗೇಡಿಗಳು ಈ ಕೃತ್ಯವನ್ನು ನಡೆಸಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅಥವಾ ಯಾವುದೋ ಕಟ್ಟಡಕ್ಕೆ ಕಟ್ಟಿದ ಧ್ವಜ ಮಳೆಗೆ ಬಿದ್ದಿರುವ ಸಾಧ್ಯತೆಯನ್ನೂ ಊಹಿಸಬಹುದಾಗಿದೆ.

- Advertisement -


ಸಂಪೂರ್ಣವಾಗಿ ಕೆಸರಿನಿಂದ ತುಂಬಿದ್ದ ತ್ರಿವರ್ಣ ಧ್ವಜವನ್ನು ಧರ್ಮಸ್ಥಳ ಕ್ಷೇತ್ರ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಕೂಡಲೇ ಚರಂಡಿಯಿಂದ ಧ್ವಜವನ್ನು ಮೇಲಕ್ಕೆತ್ತಿದ್ದಾರೆ.


ಧ್ವಜವನ್ನು ಉಪಯೋಗಿಸುವ ನಿಯಮಾವಳಿಗಳನ್ನು ಸರ್ಕಾರ ಜನರಿಗೆ ತಲುಪಿಸಿದ್ದರೂ ಕೂಡ ಈ ರೀತಿಯ ಆಗೌರವವನ್ನು ಜನರು ರಾಷ್ಟ್ರ ಧ್ವಜಕ್ಕೆ ತೋರುತ್ತಿರುವುದು ವಿಪರ್ಯಾಸವಾಗಿದೆ.
ಹರ್ ಘರ್ ತಿರಂಗಾ ಹೆಸರಿನಲ್ಲಿ ಎಲ್ಲೆಂದರಲ್ಲಿ ಅಗೌರವವಾಗಿ ಧ್ವಜವನ್ನು ಬಳಸುವ ಮೂಲಕ ಕಪಟ ದೇಶ ಪ್ರೇಮ ವ್ಯಕ್ತಪಡಿಸಲು ಹೊರಟವರ ವಿರುದ್ಧವೂ ಸಾರ್ವಜನಿಕ ವಲಯದಲ್ಲಿ ಟೀಕೆಗಳು ಕೇಳಿ ಬರುತ್ತಿವೆ.



Join Whatsapp