ಸೌದಿ ಅರೇಬಿಯಾ | ಸ್ವಯಂ ಸ್ಫೋಟಿಸಿಕೊಂಡು ವ್ಯಕ್ತಿ ಸಾವು; ಹಲವರಿಗೆ ಗಂಭೀರ ಗಾಯ

Prasthutha|

ಜೆದ್ದಾ: ಸೌದಿ ಅರೇಬಿಯಾದ ಭದ್ರತಾ ಅಧಿಕಾರಿಗಳು ಪತ್ತೆಹಚ್ಚುತ್ತಿದ್ದ ವ್ಯಕ್ತಿಯೊಬ್ಬ ಸ್ವಯಂ ಸ್ಫೋಟಕ ಬಳಸಿಕೊಂಡು ಆತ್ಮಹತ್ಯೆ ಗೈದಿದ್ದು, ಈ ಪರಿಣಾಮ ವಿದೇಶಿ ಪ್ರಜೆ ಮತ್ತು ಮೂವರು ಭದ್ರತಾ ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಜಿದ್ದಾದಲ್ಲಿ ನಡೆದಿದೆ ಎಂದು ಸೌದಿ ಪ್ರೆಸಿಡೆನ್ಸಿ ಆಫ್ ಸ್ಟೇಟ್ ಸೆಕ್ಯುರಿಟಿ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಭದ್ರತಾ ಪಡೆಗಳು ಆತನನ್ನು ಬಂಧಿಸಲು ಯತ್ನಿಸಿದಾಗ ಈ ಘಟನೆ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸ್ವಯಂ ಸ್ಫೋಟಿಸಿದ ವ್ಯಕ್ತಿಯನ್ನು ಅಬ್ದುಲ್ಲಾ ಬಿನ್ ಝೈದ್ ಅಬ್ದುಲ್ ರಹ್ಮಾನ್ ಅಲ್ ಬಕ್ರಿ ಅಲ್ ಶಿಹ್ರಿ ಎಂದು ಗುರುತಿಸಲಾಗಿದೆ. ವಿವಿಧ ಭದ್ರತಾ ಪ್ರಕರಣಗಳಲ್ಲಿ ಸೌದಿ ಅಧಿಕಾರಿಗಳಿಗೆ ಬೇಕಾಗಿರುವ ಒಂಬತ್ತು ಭಯೋತ್ಪಾದಕರ ಪೈಕಿ ಈತ ಸೌದಿಯಿಂದ ಪರಾರಿಯಾಗಿದ್ದ ಎಂದು ಮಾಧ್ಯಮಗಳು ವರದಿ ಮಾಡಿವೆ.



Join Whatsapp