ಚಿಕ್ಕಮಗಳೂರು : ಪ್ರಸಿದ್ಧ ಪ್ರವಾಸಿ ತಾಣ ಕೆಮ್ಮಣ್ಣುಗುಂಡಿ ಕಾಂಕ್ರೀಟ್ ರಸ್ತೆಯಲ್ಲಿ ಬಿರುಕುಂಟಾಗಿದ್ದು ಭಾರೀ ಮಳೆಗೆ ಕಾಂಕ್ರೀಟ್ ರಸ್ತೆ ಬಾಯ್ತೆರೆದುಕೊಂಡಿದೆ.
ಇದು ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ಪ್ರವಾಸಿ ತಾಣ ಹೆಬ್ಬೆ ಮತ್ತು ಕೆಮ್ಮಣ್ಣುಗುಂಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ರಸ್ತೆಯ ಎಡಬದಿಯಲ್ಲಿ ಸುಮಾರು ಮೂರು ಅಡಿ ಭೂಮಿ ಕುಸಿದಿದೆ. ಕ್ಷಣ-ಕ್ಷಣಕ್ಕೂ ಬಿರುಕು ಬಿಟ್ಟು ರಸ್ತೆ ಕುಸಿಯುತ್ತಿದ್ದು, ಪ್ರವಾಸಿಗರಿಗೆ ಜೀವ ಭಯವುಂಟಾಗಿದೆ.
ಪ್ರಸ್ತುತ ಸ್ಥಳದ ಬಗ್ಗೆ ಅಧಿಕಾರಿಗಳು ಯಾವುದೇ ಮುನ್ನೆಚ್ಚರಿಕೆ ವಹಿಸದೆ ನಿರ್ಲಕ್ಷ ತೋರುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.