ಮುಸ್ಲಿಮರಿಗೆ ವರ್ಷದಲ್ಲಿ ಎರಡು ಬಾರಿ, 3 ಗಂಟೆ ಮಾತ್ರ ಅವಕಾಶ
ಹುಬ್ಬಳ್ಳಿ: ಮುಸ್ಲಿಮರಿಗೆ ವರ್ಷದಲ್ಲಿ ಎರಡು ಬಾರಿ, 3 ಗಂಟೆ ಪ್ರಾರ್ಥನೆಗೆ ಅವಕಾಶ ಕೊಡಬೇಕು ಬಿಟ್ಟರೆ, ಉಳಿದ ವರ್ಷ ಪೂರ್ತಿ ಹುಬ್ಬಳ್ಳಿ ಈದ್ಗಾ ಮೈದಾನ ಪಾಲಿಕೆಯ ಸೊತ್ತು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಈದ್ಗಾ ಮೈದಾನವು ಪಾಲಿಕೆಯ ಸೊತ್ತು. ಈ ಬಗ್ಗೆ ಅನಗತ್ಯ ಗೊಂದಲ ಬೇಡ. ಹೀಗಿರುವಾಗ ಈದ್ಗಾ ಮೈದಾನದಲ್ಲಿ ಯಾವ ಕಾರ್ಯಕ್ರಮ ನಡೆಯಬೇಕು, ಯಾವುದಕ್ಕೆ ಅನುಮತಿ ನೀಡಬೇಕು ಎಂಬುದನ್ನ ನಿರ್ಧರಿಸುವ ಅಧಿಕಾರ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಇದೆ. ಗಣೇಶೋತ್ಸವ ವಿಚಾರವಾಗಿಯೂ ಅನುಮತಿ ನೀಡಬಹುದು ಎಂದು ಹೇಳಿದರು.
ಈ ಹಿಂದೆ ಚಾಮರಾಜಪೇಟೆ ಈದ್ಗಾ ಮೈದಾನದ ವಿಚಾರದಲ್ಲೂ ಸಂಘ ಪರಿವಾರದ ಗೂಂಡಾಗಳು ವಿವಾದವೆಬ್ಬಿಸಿ ಅಲ್ಲೂ ಗಣೇಶೋತ್ಸವಕ್ಕೆ ಅವಕಾಶ ಕೋರಿದ್ದು, ಇದೀಗ ಆ ಈದ್ಗಾ ಮೈದಾನವನ್ನೂ ಬಿಬಿಎಂಪಿ ತನ್ನ ಆಸ್ತಿ ಎಂದು ಘೋಷಿಸಿಕೊಂಡಿದೆ.