ಸಾಲ ವಸೂಲಿ ವೇಳೆ ಧಮ್ಕಿ ಹಾಕುವಂತಿಲ್ಲ : ಬ್ಯಾಂಕ್ ಏಜೆಂಟರಿಗೆ RBI ವಾರ್ನಿಂಗ್

Prasthutha|

ಮುಂಬೈ: ಸಾಲ ವಸೂಲಾತಿ ವೇಳೆ ಬ್ಯಾಂಕಿಂಗ್ ರಿಕವರಿ ಏಜೆಂಟರು ಗ್ರಾಹಕರಿಗೆ ಬೆದರಿಕೆ ಹಾಕುವಂತಿಲ್ಲ ಮತ್ತು ಬೆಳಗ್ಗೆ 8 ಗಂಟೆಗೆ ಮೊದಲು ಮತ್ತು ಸಂಜೆ 7 ಗಂಟೆಯ ನಂತರ ಕರೆ ಮಾಡುವಂತಿಲ್ಲ ಎಂದು RBl ಖಡಕ್ ವಾರ್ನಿಂಗ್ ಕೊಟ್ಟಿದೆ.

- Advertisement -

ಹಣ ರಿಕವರಿಗಾಗಿ ಏಜೆಂಟರು ಸ್ವೀಕಾರ್ಹವಲ್ಲದ ವರ್ತನೆ ತೋರುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಹೊಸ ಸುತ್ತೋಲೆ ಹೊರಡಿಸಿದ RBI, ಏಜೆಂಟರಿಗೆ ಗ್ರಾಹಕರ ಜೊತೆಗಿನ ವರ್ತನೆ ಬಗ್ಗೆ ಎಚ್ಚರಿಕೆ ನೀಡಿದೆ.

ಸಾಲ ವಸೂಲಿ ಸಂದರ್ಭದಲ್ಲಿ ಸಂಸ್ಥೆಗಳ ಪ್ರತಿನಿಧಿಗಳು ಬಲಪ್ರಯೋಗ, ಕಿರುಕುಳ ನೀಡುವಂಥ ಕ್ರಮಗಳನ್ನು ಅನುಸರಿಸಬಾರದು. ಅನಪೇಕ್ಷಿತ ಮೆಸೇಜ್ ಗಳು, ಅನಾಮಧೇಯರ ಹೆಸರಿನಲ್ಲಿ ಬೆಳಗ್ಗೆ 8 ಗಂಟೆಯಿಂದ ಮೊದಲು ಮತ್ತು ರಾತ್ರಿ 7 ಗಂಟೆಯ ಬಳಿಕ ಕರೆ ಮಾಡಬಾರದು ಎಂದು ತನ್ನ ಸುತ್ತೋಲೆಯಲ್ಲಿ ಆರ್‌ಬಿಐ ಸೂಚಿಸಿದೆ.

- Advertisement -

ಗ್ರಾಹಕರ ಜೊತೆಗೆ ರಿಕವರಿ ಏಜೆಂಟರು ಸರಿಯಾಗಿ ನಡೆದುಕೊಳ್ಳಬೇಕು. ಯಾವುದೇ ಗ್ರಾಹಕರ ಜೊತೆಗೆ ಅನುಚಿತ ವರ್ತನೆ ತೋರುವುದು ಸರಿಯಲ್ಲ. ಸರಿಯಾದ ರೀತಿಯಲ್ಲಿ ಸಾಲ ವಸೂಲಾತಿ ಮಾಡಬೇಕು. ನಿಂದಿಸುವುದು ಅಥವಾ ಮಾನಸಿಕ-ದೈಹಿಕ ಕಿರುಕುಳ ನೀಡುವುದು ಕಂಡುಬಂದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೂಗೊಳ್ಳಬೇಕಾಗುತ್ತದೆ ಎಂದು ಕಠಿಣ ಸಂದೇಶ ರವಾನಿಸಿದೆ.



Join Whatsapp