ಶಿವಮೊಗ್ಗ: ಬಾಲ್ಯ ವಿವಾಹ ಆರೋಪ;ಯುವಕ ಪೊಲೀಸ್ ಕಸ್ಟಡಿಗೆ

Prasthutha|

ಭದ್ರಾವತಿ: ಬಾಲ್ಯ ವಿವಾಹ ಆರೋಪದಡಿ ಯವಕನೊಬ್ಬನನ್ನು ಪೊಲೀಸರು ಬಂಧಿಸಿದ ಘಟನೆ ಹೊಳೆಹೊನ್ನೂರಿನಲ್ಲಿ ನಡೆದಿದೆ.

- Advertisement -

ಯುವಕನು ಬಾಲಕಿಯನ್ನು ಪ್ರೀತಿಸಿ ಮದುವೆಯಾಗಿದ್ದು,  ಸದ್ಯ ಬಾಲಕಿಯನ್ನು ಬಾಲಮಂದಿರದಲ್ಲಿ ಇರಿಸಲಾಗಿದೆ.

ಬಾಲಕಿಗೆ 13 ವರ್ಷ ಪ್ರಾಯವಿರುವಾಗಲೇ ಅದೇ ಗ್ರಾಮದ ಯುವಕನೊಂದಿಗೆ ಪ್ರೀತಿಯುಂಟಾಗಿತ್ತು. ಮನೆಯವರ ಅನುಮತಿ  ಸಿಗುವುದಿಲ್ಲ ಎಂದು ತೀರ್ಮಾನಿಸಿ  ತಿಂಗಳ ಹಿಂದೆ ನಾಪತ್ತೆಯಾಗಿದ್ದರು.

- Advertisement -

ಬಾಲಕಿಯ ಪೋಷಕರ ದೂರಿನನ್ವಯ ಬಾಲಕಿ ನಾಪತ್ತೆಯಾದ ಬೆನ್ನಲ್ಲೇ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.

ಇದೀಗ  ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದ ಜೋಡಿ ಈಗ ಪತ್ತೆಯಾಗಿದೆ. ಬಾಲಕಿಯನ್ನು ಮದುವೆಯಾದ ಕಾರಣ ಪೋಕ್ಸೋ  ಕಾಯ್ದೆಯಡಿ ಯುವಕನನ್ನು ಬಂಧಿಸಲಾಗಿದೆ.



Join Whatsapp