ಹೊಸನಗರ : ವಿದ್ಯುತ್ ಶಾಕ್ ತಗುಲಿದ ಪರಿಣಾಮ ಮೇಯಲು ಬಿಟ್ಟಿದ್ದ ನಾಲ್ಕು ದನಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಅರಮನೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬುರುಳಿ ಕಾರೆಹಕ್ಲು ಬಳಿ ನಡೆದಿದೆ.
ಹೆಬ್ಬುರುಳಿ ಗ್ರಾಮದ ವೀರಭದ್ರ ಗೌಡರಿಗೆ ಸೇರಿದ ಕನಿಷ್ಠ 50 ಸಾವಿರ ರೂ. ಬೆಲೆ ಬಾಳುವ ನಾಲ್ಕು ದನಗಳು ವಿದ್ಯುತ್ ಕಂಬದ ಸಮೀಪದಲ್ಲಿ ಮೇಯುತ್ತಿತ್ತು. ವಿದ್ಯುತ್ ಕಂಬದ ಸಮೀಪದ ಡ್ಯುಯಲ್ ಹ್ಯಾಂಗರ್ ಓಪನ್ ಆಗಿದ್ದು, ಜಾನುವಾರುಗಳಿಗೆ ವಿದ್ಯುತ್ ಸ್ಪರ್ಶಗೊಂಡು ಸ್ಥಳದಲ್ಲೇ ಪ್ರಾಣ ಬಿಟ್ಟಿವೆ ಎಂದು ತಿಳಿದು ಬಂದಿದೆ.
ಸಾವಿಗೆ ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯವೇ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಮ್ಕೋಸ್ ನಿರ್ದೇಶಕ ಮತ್ತಿಮನೆ ರಮಾಕಾಂತ್, ತಾ.ಪಂ. ಮಾಜಿ ಸದಸ್ಯ ಮತ್ತಿಮನೆ ಕೆ ವಿ ಸುಬ್ರಹಣ್ಯ, ಗ್ರಾ.ಪಂ.ಮಾಜಿ ಅಧ್ಯಕ್ಷ ಡಿ ಟಿ ಕೃಷ್ಣಮೂರ್ತಿ ಹಾಗೂ ಗ್ರಾಮ ಪಂಚಾಯಿತ್ ಆಡಳಿತ ಸೇರಿದಂತೆ ಘಟನಾ ಸ್ಥಳ ಪರಿಶೀಲನೆ ಮಾಡಿ ಜಾನುವಾರು ಮಾಲಿಕ ವೀರಭದ್ರಪ್ಪಗೌಡರಿಗೆ ಸಾಂತ್ವನ ಹೇಳಿದರು.