ಮಾಟ-ಮಂತ್ರ ಕುರಿತ ಹೇಳಿಕೆಯ ಮೂಲಕ ಪ್ರಧಾನಿ ಹುದ್ದೆಯ ಘನತೆಗೆ ಧಕ್ಕೆ ತರಬೇಡಿ: ರಾಹುಲ್ ಗಾಂಧಿ

Prasthutha|

ನವದೆಹಲಿ: ಮಾಟ-ಮಂತ್ರ ಒಳಗೊಂಡಂತೆ ಮೂಢನಂಬಿಕೆಯ ಕುರಿತ ಹೇಳಿಕೆಯನ್ನು ನೀಡಿ ಪ್ರಧಾನಿ ಹುದ್ದೆಯ ಘನತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಿ ಎಂದು ರಾಹುಲ್ ಗಾಂಧಿ ಅವರು ಮೋದಿಗೆ ತಿರುಗೇಟು ನೀಡಿದ್ದಾರೆ.

- Advertisement -

ಬೆಲೆಯೇರಿಕೆಯ ವಿರುದ್ಧ ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಪ್ರಧಾನಿ ಮೋದಿ, ಈ ಪ್ರತಿಭಟನೆಯನ್ನು ಮಾಟ-ಮಂತ್ರಕ್ಕೆ ಹೋಲಿಕೆ ಮಾಡಿದ್ದರು. ಇದರ ವಿರುದ್ಧ ಮಾತನಾಡಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಮಾಟ-ಮಂತ್ರದ ಮೇಲೆ ನಂಬಿಕೆ ಇಟ್ಟವರು ಎಂದಿಗೂ ಜನರ ವಿಶ್ವಾಸವನ್ನು ಗಳಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು, ಪ್ರಧಾನಿ ಹುದ್ದೆಯ ಘನತೆಯನ್ನು ಕಡಿಮೆ ಮಾಡುವುದನ್ನು ನಿಲ್ಲಿಸಿ ಮತ್ತು ನಿಮ್ಮ ಕರಾಳ ಕೃತ್ಯಗಳನ್ನು ಮರೆಮಾಚಲು ಮಾಟ-ಮಂತ್ರದಂತಹ ಮೂಢನಂಬಿಕೆಗಳ ಬಗ್ಗೆ ಮಾತನಾಡಿ ದೇಶವನ್ನು ದಾರಿ ತಪ್ಪಿಸಲು ಅವಕಾಶ ನೀಡಬೇಡಿ ಮೋದಿ-ಜಿ ಎಂದು ಮೂದಲಿಸಿದ್ದಾರೆ.

- Advertisement -

ಅಲ್ಲದೆ, ದೇಶದಲ್ಲಿ ಹಣದುಬ್ಬರ ಅಥವಾ ನಿರುದ್ಯೋಗವನ್ನು ನೋಡಲು ಪ್ರಧಾನಿಗೆ ಸಾಧ್ಯವಾಗುತ್ತಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.



Join Whatsapp