ಪೊಲೀಸ್ ಮೆಸ್ ನಲ್ಲಿ ಕಳಪೆ ಗುಣಮಟ್ಟದ ಆಹಾರ: ನಡುಬೀದಿಯಲ್ಲಿ ತಟ್ಟೆ ಹಿಡಿದು ಪ್ರತಿಭಟಿಸಿದ ಪೊಲೀಸ್

Prasthutha|

ಫಿರೋಜಾಬಾದ್: ಫಿರೋಜಾಬಾದ್ ಜಿಲ್ಲೆಗೆ ನಿಯೋಜಿತರಾದ ಯುಪಿಯ ಕಾನ್ಸ್ ಟೇಬಲ್ ಮನೋಜ್ ಕುಮಾರ್ ಎಂಬವರು ಕೈಯ್ಯಲ್ಲಿ ಆಹಾರದ ತಟ್ಟೆ ಹಿಡಿದು ಫಿರೋಜಾಬಾದ್ ಪೊಲೀಸ್ ಲೈನ್ಸ್ ಮುಂಭಾಗದ ಹೆದ್ದಾರಿಯಲ್ಲಿ ಬುಧವಾರ ಪ್ರತಿಭಟಿಸಿದ್ದಾರೆ.

- Advertisement -

ಆಹಾರದ ಗುಣಮಟ್ಟವನ್ನು ಪ್ರಶ್ನಿಸಿ ಅಳುತ್ತಾ, ಪೊಲೀಸ್ ಲೈನ್ ಮೆಸ್ ನಲ್ಲಿ ಪೊಲೀಸರಿಗೆ ಗಲೀಜು ಆಹಾರವನ್ನು ಪೂರೈಸಲಾಗುತ್ತಿದೆ. ಎರಡು ದಿನಗಳಿಂದ ಹಸಿವಿನಿಂದ ಬಳಲುತ್ತಿದ್ದರೂ ಯಾವುದೇ ಅಧಿಕಾರಿ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿ ರಸ್ತೆಯಲ್ಲಿ ತಟ್ಟೆಯಲ್ಲಿ ರೊಟ್ಟಿ ಹಿಡಿದು ಮನೋಜ್ ಪ್ರತಿಭಟಿಸುತ್ತಿದ್ದರು.

ಇದೀಗ ಈ ವೀಡಿಯೋ ವೈರಲ್ ಆಗಿದೆ

- Advertisement -

ವಿಷಯ ತಿಳಿದ ಇನ್ಸ್ಪೆಕ್ಟರ್ ಆದೇಶದ ಮೇರೆಗೆ, ಕಾನ್ಸ್ಟೇಬಲ್ ಅನ್ನು ತಕ್ಷಣವೇ ಬಲಪ್ರಯೋಗದ ಮೂಲಕ ಪೊಲೀಸ್ ಲೈನ್ ಗೆ ಕರೆತರಲಾಯಿತು ಎನ್ನಲಾಗಿದೆ. ಮತ್ತು ಈ ಪ್ರಕರಣದ ವಿಚಾರಣೆ ನಡೆಸಲು ಎಸ್ಎಸ್ಪಿ, ಸಿಒ ಲೈನ್ ಹೀರಾಲಾಲ್ ಕನೋಜಿಯಾ ಅವರಿಗೆ ಆದೇಶ ನೀಡಿದ್ದಾರೆ.



Join Whatsapp