ದೇಶದ ಸ್ಥಿತಿಯನ್ನು ಸುಧಾರಿಸಲು ಒಬ್ಬ ನಾಯಕನಿಂದ ಸಾಧ್ಯವಿಲ್ಲ: ಮೋಹನ್ ಭಾಗವತ್

Prasthutha|

ನಾಗ್ಪುರ: ದೇಶದ ಸ್ಥಿತಿಯನ್ನು ಸುಧಾರಿಸಲು ಅಥವಾ ಬದಲಾವಣೆ ತರಲು ಒಬ್ಬ ನಾಯಕನಿಂದ, ಒಂದು ಸಂಘಟನೆ ಅಥವಾ ಪಕ್ಷದಿಂದ ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

- Advertisement -

ಮರಾಠಿ ಸಾಹಿತ್ಯ ಸಂಘಟನೆ ‘ವಿದರ್ಭ ಸಾಹಿತ್ಯ ಸಂಘ’ದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಬ್ಬ ನಾಯಕನೇ ಎಲ್ಲ ಸವಾಲುಗಳನ್ನು ನಿವಾರಿಸಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ. ಎಂಥ ದೊಡ್ಡ ನಾಯಕನೇ ಆಗಿದ್ದರೂ, ಆತನಿಂದ ಇದು ಸಾಧ್ಯವಿಲ್ಲ’. ಈ ವಿಚಾರವೇ ಆರ್ ಎಸ್ ಎಸ್ ಸಿದ್ಧಾಂತದ ತಳಹದಿಯೂ ಆಗಿದೆ ಎಂದು ಹೇಳಿದರು.

ಸಾಮಾನ್ಯ ಜನರು ಬೀದಿಗಿಳಿದು ಹೋರಾಟ ನಡೆಸಿದ್ದರಿಂದಲೇ ಈ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಕಾರಿಗಳ ಕೊಡುಗೆಯೂ ದೊಡ್ಡದಿದೆ. ಸುಭಾಶ್ಚಂದ್ರ ಬೋಸ್ ಅವರು ಬ್ರಿಟಿಷರಿಗೇ ಸವಾಲಾಗಿ ಪರಿಣಮಿಸಿದ್ದರು. ಅವರಿಂದಾಗಿ ಸಾಮಾನ್ಯ ಪ್ರಜೆಯೂ ಧೈರ್ಯದಿಂದ ಸಂಗ್ರಾಮದಲ್ಲಿ ಧುಮುಕುವಂತಾಯಿತು’ ಎಂದರು.

- Advertisement -

 ‘ಹಿಂದೂ ಸಮಾಜ ತನ್ನ ಮೇಲಿರುವ ಜವಾಬ್ದಾರಿಯನ್ನು ನಿಭಾಯಿಸುವಷ್ಟು ಸಾಮರ್ಥ್ಯವನ್ನು ಹೊಂದಬೇಕು. ಸಮಾಜವೇ ನಾಯಕರನ್ನು ಸೃಷ್ಟಿಸುತ್ತದೆಯೇ ಹೊರತು ನಾಯಕರು ಸಮಾಜವನ್ನು ನಿರ್ಮಿಸಲಾರರು’ ಎಂದೂ ಭಾಗವತ್ ತಿಳಿಸಿದರು.



Join Whatsapp