ವಿಟ್ಲ: ಬಿಜೆಪಿ ನಾಯಕ ಹಾಗೂ ಗ್ರಾ. ಪಂ ಸದಸ್ಯ ಪುನೀತ್ ಮಾಡತ್ತಾರ್ ನಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕೇಪು ಗಣೇಶ, ನಿಶಾಂತ್ ಶೆಟ್ಟಿ ನೀರುಮಾರ್ಗ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ವಿಟ್ಲದ ಚಂದಳಿಕೆ ಮಾಡತ್ತಡ್ಕ ರಸ್ತೆಯಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ರಸ್ತೆಗೆ ಕಾಂಕ್ರೇಟ್ ಮಿಕ್ಸರ್ ಅಡ್ಡದಾಗಿ ನಿಲ್ಲಿಸಿದ್ದ ವಿಚಾರವಾಗಿ ಪುನೀತ್ ಮಾಡತ್ತಾರ್ ನಿಗೆ ಬೈಕ್ ನಲ್ಲಿ ಬಂದ ಇಬ್ಬರು ಹಲ್ಲೆ ನಡೆಸಿದ್ದರು. ಗಾಯಗೊಂಡ ಪುನೀತ್ ಆಸ್ಪತ್ರೆಗೆ ದಾಖಲಾಗಿದ್ದರು.