ಮಂಗಳೂರು: ಮಂಗಳೂರು ದಕ್ಷಿಣ ವಿಧಾನ ಸಭಾ ವ್ಯಾಪ್ತಿಯಲ್ಲಿ ಮಾಜಿ ಶಾಸಕ ಜೆ. ಆರ್. ಲೋಬೋ ನೇತೃತ್ವದಲ್ಲಿ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಅಂಗವಾಗಿ ಬುಧವಾರ ಸ್ವಾತಂತ್ರ್ಯದ ನಡಿಗೆ ನಡೆಯಿತು.
ಪಾಂಡೇಶ್ವರದಲ್ಲಿರುವ ನೆಹರೂ ಪ್ರತಿಮೆಯಿಂದ ಆರಂಭಗೊಂಡ ನಡಿಗೆ ಲಾಲ್ ಬಾಗ್ ನ ಮಹಾತ್ಮಾ ಗಾಂಧೀಜಿಯವರ ಪ್ರತಿಮೆ ಬಳಿ ನಡಿಗೆಯು ಕೊನೆಗೊಂಡಿತು. ಸ್ವಾತಂತ್ರ್ಯ ನಮನದೊಂದಿಗೆ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಹಿರಿಯರನ್ನು ಸ್ಮರಿಸಲಾಯಿತು.
ಮುಖ್ಯ ಅತಿಥಿಯಾಗಿ ವಿಶ್ವವಿದ್ಯಾನಿಲಯದ ಉದಯಕುಮಾರ್ ಮಾತನಾಡಿ, ಅಂದಿನ ತ್ಯಾಗ ಮರೆತು ಇಂದು ಅಧಿಕಾರಕ್ಕಾಗಿ ಬಡಿದಾಡುತ್ತಿದ್ದಾರೆ. ಸ್ವಾತಂತ್ರ್ಯದ ಆಚರಣೆ ಮುಖ್ಯವಲ್ಲ. ಆ ಕಾಲದ ಹೋರಾಟ, ಸತ್ಯ, ಸತ್ಯಾಗ್ರಹ ಎಲ್ಲಿಗೆ ನಡೆದಿದೆ ಎಂಬುದನ್ನು ಗುರುತಿಸಬೇಕು. ನಮ್ಮ ಯುವಕರಿಗೆ ಅವಕಾಶ ನೀಡದೆ ವಂಚಿಸುವುದನ್ನು ತಪ್ಪಿಸಬೇಕು ಎಂದರು.
ಮುಖಂಡರಾದ ಶಾಹುಲ್ ಹಮೀದ್, ವಿಶ್ವಾಸ್ ದಾಸ್, ಶಾಲೆಟ್ ಪಿಂಟೋ, ಶಶಿಧರ ಹೆಗ್ಡೆ ಜಿ. ಎ. ಬಾವಾ, ಅಪ್ಪಿ, ರವೂಫ್, ಪ್ರಕಾಶ್ ಸಾಲಿಯಾನ್ ಉಪಸ್ಥಿತರಿದ್ದರು.