ಈದ್ಗಾ ಮೈದಾನ: ಬಾಬ್ರಿ ಕೆಡವಿದಂತೆ ಕಿಬ್ಲಾ ಗೋಡೆ ಕೆಡವುತ್ತೇವೆ ಎಂದವನ ವಿರುದ್ಧ ಸುಮೋಟೋ ಕೇಸ್ ದಾಖಲು

Prasthutha|

ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನದ ಕಿಬ್ಲಾ ಗೋಡೆಯನ್ನು ನೆಲಸಮಗೊಳಿಸುವ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದಕ್ಕಾಗಿ ವಿಶ್ವ ಸನಾತನ ಪರಿಷತ್ ಅಧ್ಯಕ್ಷ ಎಸ್.ಭಾಸ್ಕರನ್ ಎಂಬಾತನ ವಿರುದ್ಧ ಚಾಮರಾಜಪೇಟೆ ಪೊಲೀಸರು ಸ್ವಯಂಪ್ರೇರಿತ ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.

- Advertisement -

ವಕ್ಫ್ ಮಂಡಳಿ ಮತ್ತು ಬಿಬಿಎಂಪಿ ನಡುವೆ ಮೈದಾನದ ಮಾಲೀಕತ್ವ ಮತ್ತು ಬಳಕೆಯ ಬಗ್ಗೆ ಚರ್ಚೆ ನಡೆಯುತ್ತಿದ್ದು ಆಗಸ್ಟ್ 6ರಂದು ಬಿಬಿಎಂಪಿ ಈದ್ಗಾ ಮೈದಾನವು ಕಂದಾಯ ಇಲಾಖೆಗೆ ಸೇರಿದ್ದು ಎಂದು ಹೇಳಿಕೆ ನೀಡಿತ್ತು.

ವಕ್ಫ್ ಬೋರ್ಡ್, ಕಿಬ್ಲಾ ಗೋಡೆಯನ್ನು ತೆಗೆದುಹಾಕಬೇಕು ಅಥವಾ ಅದನ್ನು ಸರ್ಕಾರ ನೆಲಸಮಗೊಳಿಸಬೇಕು ಎಂದು ಭಾಸ್ಕರನ್ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದ. ಅಧಿಕಾರಿಗಳು ಅದನ್ನು ನೆಲಸಮ ಮಾಡದಿದ್ದರೆ, ನಾವು ಡಿಸೆಂಬರ್ 6 ರಂದು ಬಾಬ್ರಿ ಮಸೀದಿ ಧ್ವಂಸದ ವಾರ್ಷಿಕೋತ್ಸವದಂದು ಬಾಬ್ರಿಯಂತೆ ಇದನ್ನೂ ನೆಲಸಮ ಮಾಡುತ್ತೇವೆ. ನೆರೆಯ ರಾಜ್ಯಗಳ ಸಂಘಟನೆಗಳು ನಮ್ಮ ಸಂಪರ್ಕದಲ್ಲಿದ್ದಾರೆ. ನಾವು ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಒಟ್ಟುಗೂಡಿಸಿ ಗೋಡೆಯನ್ನು ಕೆಡವುತ್ತೇವೆ ಎಂದು ಭಾಸ್ಕರನ್ ಹೇಳಿದ್ದನು.

- Advertisement -

ಇಂತಹ ಅವಹೇಳನಕಾರಿ ಹೇಳಿಕೆ ನೀಡಿ , ಸಮಾಜದ ಶಾಂತಿ ಕದಡಲು ಯತ್ನಿಸಿದಕ್ಕಾಗಿ ಭಾಸ್ಕರನ್ ವಿರುದ್ಧ ದೂರು ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿದ್ದೇವೆ ಎಂದು ಸಬ್ ಇನ್ಸ್ಪೆಕ್ಟರ್ ನಾಗೇಂದ್ರ ಹೇಳಿದ್ದಾರೆ.



Join Whatsapp