ಕಠ್ಮಂಡು: ಭಾರತದಿಂದ ನೇಪಾಳ ಪ್ರವೇಶಿಸಿದ್ದ ನಾಲ್ವರು ಭಾರತೀಯ ಪ್ರಜೆಗಳಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟ ನಂತರ ಅವರನ್ನು ವಾಪಸ್ ಕಳುಹಿಸಿದ್ದು, ಭಾರತೀಯ ಪ್ರವಾಸಿಗರ ಪ್ರವೇಶವನ್ನು ನೇಪಾಳ ನಿರ್ಬಂಧಿಸಿದೆ.
ಜುಲಾಘಟ್ ಗಡಿ ಮೂಲಕ ನಾಲ್ವರು ಭಾರತೀಯ ಪ್ರವಾಸಿಗರು ನೇಪಾಳ ಪ್ರವೇಶಿಸಿದ್ದರು. ನಾಲ್ವರು ಭಾರತೀಯ ಪ್ರಜೆಗಳಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟ ನಂತರ ಅವರನ್ನು ಭಾರತಕ್ಕೆ ಮರಳುವಂತೆ ತಿಳಿಸಲಾಯಿತು ಎಂದು ಬೈತಾಡಿ ಆರೋಗ್ಯ ಕೇಂದ್ರದ ಮಾಹಿತಿ ಅಧಿಕಾರಿ ಬಿಪಿನ್ ಲೆಕಾಕ್ ತಿಳಿಸಿದ್ದಾರೆ.
ಭಾರತೀಯರ ಕೋವಿಡ್-19 ಪರೀಕ್ಷೆಯನ್ನು ಹೆಚ್ಚಿಸಲಾಗಿದೆ. ಭಾರತದಿಂದ ಆಗಮಿಸಿರುವ ಅನೇಕ ನೇಪಾಳಿ ಜನರಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗಿದೆ. ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಭಾರತದ ಪ್ರವಾಸಿಗರು ನೇಪಾಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.