RSS ಕಾರ್ಯಕ್ರಮದಲ್ಲಿ ಸಿಪಿಐಎಂ ಮೇಯರ್ !

Prasthutha|

ಕೋಝಿಕ್ಕೋಡ್: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್)ದ ಅಂಗಸಂಸ್ಥೆಯಾದ ಬಾಲಗೋಕುಲಂ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಪಿಐಎಂ ಪಕ್ಷಕ್ಕೆ ಸೇರಿದ ಕೋಝಿಕ್ಕೋಡ್ ಮೇಯರ್ ಬೀನಾ ಫಿಲಿಪ್ ಭಾಗವಹಿಸಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -

ಬೀನಾ ಫಿಲಿಪ್ ವಿರುದ್ಧ ಕ್ರಮ ಕೈಗೊಳ್ಳಲು ಸಿಪಿಐಎಂ ಸೋಮವಾರ ನಿರ್ಧರಿಸಿದೆ. ಮೇಯರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ನಾಯಕತ್ವವು ಜಿಲ್ಲಾ ಘಟಕಕ್ಕೆ ನಿರ್ದೇಶನ ನೀಡಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸುವ ಮೇಯರ್ ಅವರ ನಿರ್ಧಾರ ತಪ್ಪು ಮತ್ತು ಅದು ಪಕ್ಷದ ನಿಲುವಿಗೆ ವಿರುದ್ಧವಾಗಿದೆ ಎಂದು ಜಿಲ್ಲಾ ಘಟಕ ಹೇಳಿದೆ.

- Advertisement -

ಬೀನಾ ಫಿಲಿಪ್ ಆಗಸ್ಟ್ 14 ರಂದು ಶ್ರೀ ಕೃಷ್ಣ ಜಯಂತಿ ಆಚರಣೆ ಅಂಗವಾಗಿ ಬಾಲಗೋಕುಲಂ ಆಯೋಜಿಸಿದ್ದ ತಾಯಂದಿರ ಸಭೆಯಲ್ಲಿ ಭಾಗವಹಿಸುವ ಮೂಲಕ ಪಕ್ಷದ ನೀತಿಯನ್ನು ಉಲ್ಲಂಘಿಸಿದ್ದಾರೆ ಎಂದು ಎಡಪಕ್ಷದ ಮುಖಂಡರು ಟೀಕಿಸಿದ್ದರು.

ಸಿಪಿಐಎಂ, ಆರ್ ಎಸ್ ಎಸ್ ಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮಗಳಿಂದ ದೂರ ಉಳಿಯುವ ಘೋಷಿತ ನಿಲುವನ್ನು ಹೊಂದಿದೆ. ಮೇಯರ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ರಾಜ್ಯದಲ್ಲಿ ಮಾರ್ಕ್ಸ್ ವಾದಿ ಪಕ್ಷ ಮತ್ತು ಬಿಜೆಪಿಗೆ ಪರೋಕ್ಷ ನಂಟಿದೆ ಎಂಬ ಪ್ರತಿಪಕ್ಷ ಕಾಂಗ್ರೆಸ್ ಆರೋಪಕ್ಕೆ ಪುಷ್ಟಿ ನೀಡಿದಂತಾಗಿದೆ.



Join Whatsapp