ಮಲೆನಾಡಿನಲ್ಲಿ ಮುಂದುವರಿದ ಧಾರಾಕಾರ ಮಳೆ

Prasthutha|

ಚಿಕ್ಕಮಗಳೂರು: ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ, ಬಣಕಲ್, ಬಾಳೂರು, ದೇವರಮನೆ, ಗುತ್ತಿ, ಮುಂತಾದ ಕಡೆ ಭಾರೀ ಗಾಳಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತ ವಾಗಿದೆ.

- Advertisement -

ಗಾಳಿ ಮಳೆಗೆ ಬಣಕಲ್ ಸರಕಾರಿ ಆಸ್ಪತ್ರೆಯ  ಪಕ್ಕ ಸಿಬ್ಬಂದಿ  ನರ್ಸ್ ಸುಮಿತ್ರಾ  ವಾಸಿಸುತ್ತಿದ್ದ  ಕೊಠಡಿಯ ಮೇಲೆ ಮರ ಬಿದ್ದು ಮೇಲ್ಛಾವಣಿ  ಜಖಂ ಆಗಿದೆ. ಬಣಕಲ್ ಪಟ್ಟಣ ಬೀದಿಯಲ್ಲಿ ಮರಗಳು ರಸ್ತೆಗೆ ಉರುಳಿವೆ.

ವಿಪರೀತ ಮಳೆ ಇದೆ ಎಂದು ಹವಾಮಾನ ಇಲಾಖೆಯ  ಸೂಚನೆಯಿದ್ದೂ ಶಾಲೆಗಳಿಗೆ ರಜೆ ಘೋಷಣೆ ಮಾಡಲಿಲ್ಲ ಎಂದು ತಿಳಿದು ಬಂದಿದೆ.



Join Whatsapp