ಕಲ್ಲಿದ್ದಲು ಹಗರಣ: ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್.ಸಿ.ಗುಪ್ತಾಗೆ 3 ವರ್ಷ ಜೈಲು ಶಿಕ್ಷೆ

Prasthutha|

ನವದೆಹಲಿ: ಮಹಾರಾಷ್ಟ್ರದ ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ ಅಕ್ರಮಗಳು ಕಂಡುಬಂದ ಹಿನ್ನೆಲೆಯಲ್ಲಿ ಕಲ್ಲಿದ್ದಲು ಹಗರಣದಲ್ಲಿ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್.ಸಿ.ಗುಪ್ತಾ ಅವರಿಗೆ ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

- Advertisement -

ಕಲ್ಲಿದ್ದಲು ಹಗರಣದಲ್ಲಿ ಮಾಜಿ ಜಂಟಿ ಕಾರ್ಯದರ್ಶಿ ಕೆ.ಎಸ್.ಕ್ರೋಫಾ ಅವರಿಗೆ ಎರಡು ವರ್ಷ ಮತ್ತು ನಾಗ್ಪುರ ಮೂಲದ ಮೆಸರ್ಸ್ ಗ್ರೇಸ್ ಇಂಡಸ್ಟ್ರೀಸ್ ಲಿಮಿಟೆಡ್ನ ನಿರ್ದೇಶಕ ಮುಕೇಶ್ ಗುಪ್ತಾ ಅವರಿಗೆ ನ್ಯಾಯಾಲಯ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ವಿಶೇಷ ನ್ಯಾಯಾಧೀಶ ಅರುಣ್ ಭಾರದ್ವಾಜ್ (ಕಲ್ಲಿದ್ದಲು ಹಗರಣ) ರೂಸ್ ಅವೆನ್ಯೂ ನ್ಯಾಯಾಲಯವು ತೀರ್ಪು ಪ್ರಕಟಿಸುವಾಗ ಗುಪ್ತಾ ಅವರಿಗೆ ಒಂದು ಲಕ್ಷ ರೂ., ಕೆ.ಎಸ್.ಕ್ರೋಫಾಗೆ 50,000 ರೂ., ಮುಕೇಶ್ ಗುಪ್ತಾಗೆ ಎರಡು ಲಕ್ಷ ಮತ್ತು ನಾಗ್ಪುರ ಮೂಲದ ಮೆಸರ್ಸ್ ಗ್ರೇಸ್ ಇಂಡಸ್ಟ್ರೀಸ್ ಲಿಮಿಟೆಡ್ ಗೆ  2 ಲಕ್ಷ ರೂ ದಂಡ ವಿಧಿಸಿದೆ.



Join Whatsapp