ಸಮಾಜವಾದಿ ಪಕ್ಷದ ನಾಯಕನ ಕಾರಿಗೆ ಟ್ರಕ್ ಡಿಕ್ಕಿ: ಕಾರನ್ನು 500 ಮೀಟರ್ ವರೆಗೆ ಎಳೆದೊಯ್ದ ಟ್ರಕ್

Prasthutha|

ಮೈನ್ ಪುರಿ(ಉತ್ತರ ಪ್ರದೇಶ): ಸಮಾಜವಾದಿ ಪಕ್ಷದ ನಾಯಕರೊಬ್ಬರ ಕಾರಿಗೆ ಟ್ರಕ್ ಡಿಕ್ಕಿ ಹೊಡೆದು ಸುಮಾರು 500 ಮೀಟರ್ ದೂರ ಎಳೆದೊಯ್ದ ಘಟನೆ ಉತ್ತರ ಪ್ರದೇಶದ ಮೈನ್ ಪುರಿಯಲ್ಲಿ ಭಾನುವಾರ ನಡೆದಿದೆ.

- Advertisement -

ಭಾನುವಾರ ತಡರಾತ್ರಿ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ದೇವೇಂದ್ರ ಸಿಂಗ್ ಯಾದವ್ ಅವರು ಕರ್ಹಾಲ್ ರಸ್ತೆಯ ಮೂಲಕ ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಮೈನ್ ಪುರಿ ಸದರ್ ಕೊತ್ವಾಲಿ ಪ್ರದೇಶದ ಭದಾವರ್ ಹೌಸ್ ಬಳಿ ಈ ಘಟನೆ ನಡೆದಿದ್ದು, ಘಟನೆಯ ಸಮಯದಲ್ಲಿ ಅವರು ಕಾರಿನಲ್ಲಿ ಒಬ್ಬರೇ ಇದ್ದರು ಎನ್ನಲಾಗಿದೆ. ಸಣ್ಣ ಪುಟ್ಟ ಗಾಯಗಳೊಂದಿಗೆ ಯಾದವ್ ಪಾರಾಗಿದ್ದಾರೆ.

ಘಟನೆಯ ನಂತರ, ಯಾದವ್ ಮೈನ್ ಪುರಿ ಸದರ್ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

- Advertisement -

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಟ್ರಕ್ ಚಾಲಕನನ್ನು ಬಂಧಿಸಿದ್ದಾರೆ.



Join Whatsapp