ಅಮಾಯಕ ವ್ಯಕ್ತಿಯನ್ನು ಬಂಧಿಸಿದರೆ ತನಿಖಾಧಿಕಾರಿಯೇ 5 ಲಕ್ಷ ರೂ. ಪರಿಹಾರ ಭರಿಸಲಿ: ಹೈಕೋರ್ಟ್ ಆದೇಶ

Prasthutha|

ಬೆಂಗಳೂರು: ಯಾವುದೇ ರೀತಿಯಲ್ಲಿಯೂ ಅಪರಾಧ ಕೃತ್ಯದಲ್ಲಿ ಭಾಗವಹಿಸದ ವ್ಯಕ್ತಿಯನ್ನು ಬಂಧನ ಮಾಡಿದರೆ, ಅದರ ಹೊಣೆಯನ್ನು ತನಿಖಾಧಿಕಾರಿಯವರೇ ವಹಿಸಬೇಕು. ಅಲ್ಲದೆ ಆತನಿಗೆ 5 ಲಕ್ಷ ರೂ. ಪರಿಹಾರವನ್ನು ಪೊಲೀಸ್ ಅಧಿಕಾರಿಯೇ ನೀಡಬೇಕೆಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.

- Advertisement -

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಿಂಗರಾಜು ಎನ್. ಎಂಬವನನ್ನು ಬಂಧಿಸಲಾಗಿದ್ದು, ಆತ ಅಮಾಯಕ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರನ್ನೊಳಗೊಂಡ ಏಕಸದಸ್ಯ ಪೀಠ ಈ ಆದೇಶವನ್ನು ನೀಡಿದೆ.

ಒಬ್ಬನ ವಿರುದ್ಧ ಆರೋಪ ಹೊರಿಸಿ ವಾರಂಟ್ ನೀಡುವಾಗ ಬಂಧಿತ ವ್ಯಕ್ತಿಯ ಗುರುತನ್ನು ದೃಢಪಡಿಸವುದು ಪೊಲೀಸರ ಪ್ರಥಮ ಕರ್ತವ್ಯವಾಗಿದೆ. ಈ ಪ್ರಕರಣದಲ್ಲಿ ಪೊಲೀಸರಿಂದ ಲೋಪ ನಡೆದು ನಿಂಗರಾಜು ಅವರನ್ನು ಕಾನೂನುಬಾಹಿರವಾಗಿ ಬಂಧಿಸಿರುವುದರಿಂದ, ಆತನಿಗೆ 5 ಲಕ್ಷ ರೂ. ಪರಿಹಾರ ನೀಡಬೇಕಾಗಿದೆ. ಇದನ್ನು ಪೊಲೀಸ್ ಅಧಿಕಾರಿಯೇ ಭರಿಸುವಂತೆ ಹೈಕೋರ್ಟ್ ಸೂಚಿಸಿದೆ.



Join Whatsapp