ಮಡಿಕೇರಿ: ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಶಾಲೆಗೆ ಹಾಗೂ ಮನೆಗೆ ಕರೆತರುವ ಜೀಪ್ ಚಾಲಕನೋರ್ವ 12 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿಯಲ್ಲಿ ನಡೆದಿದೆ.
ಆರೋಪಿ ನೆಲ್ಯಹುದಿಕೇರಿ ಬೆಟ್ಟದಕಾಡು ನಿವಾಸಿ ರಹೀಂ ಎಂಬಾತನ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ತನ್ನ ಜೀಪಿನಲ್ಲೇ ಪೊಲೀಸರು ಠಾಣೆಗೆ ಕರೆತರುವಾಗ ಚಲಿಸುತ್ತಿದ್ದ ಜೀಪಿನಿಂದ ರಸ್ತೆಗೆ ಹಾರಿ, ಆತ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.