ಗುವಾಹಟಿ: ಭಯೋತ್ಪಾದನೆ ಸಂಪರ್ಕ ಆರೋಪದಲ್ಲಿ ಇಲ್ಲಿನ ಮದ್ರಸವೊಂದನ್ನು ಸರ್ಕಾರ ನೆಲಸಮಗೊಳಿಸಿದೆ.
ಭಯೋತ್ಪಾದಕ ಸಂಬಂಧದ ಆರೋಪದಲ್ಲಿ ಮದ್ರಸದ ಸಂಸ್ಥಾಪಕರೊಬ್ಬರನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ಬುಲ್ಡೋಜರ್ ಮೂಲಕ ಮದ್ರಸವನ್ನು ನೆಲಸಮಗೊಳಿಸಲಾಗಿದೆ.
ಮೊಯಿರಬಾರಿ ಜಿಲ್ಲೆಯ ಮೊರಿಗಾಂವ್ ಜಮೀವುಲ್ ಹುದಾ ಮದ್ರಸಾದ ಸಂಸ್ಥಾಪಕ ಮುಫ್ತಿ ಮುಸ್ತಫಾ ಅವರನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದರು. ಮದ್ರಸದಲ್ಲಿ ಒಟ್ಟು 43 ವಿದ್ಯಾರ್ಥಿಗಳಿದ್ದರು. ಅವರನ್ನು ಬೇರೆ ಬೇರೆ ಮದ್ರಸಗಳಿಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.
ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಯುಎಪಿಎ ಕಾಯ್ದೆಯಡಿ ಮದ್ರಸ ನೆಲಸಮಗೊಳಿಸಲಾಗಿದೆ ಎಂದು ತಿಳಿದುಬಂದಿದೆ.