ತೈಪೈ: ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯು ತೈವಾನ್ ದ್ವೀಪ ದೇಶದ ಸುತ್ತ ತನ್ನ ಮಿಲಿಟರಿ ಅಣುಕು ಕಾರ್ಯಾಚರಣೆ ನಡೆಸಿದ್ದಲ್ಲದೆ, ಅದರ ಸುತ್ತ ಗುಂಡುಗಳನ್ನು ಹಾರಿಸಿದೆ.
ಅಣುಕು ಯುದ್ಧ ಕವಾಯತು ಆರು ಸ್ಥಳಗಳಲ್ಲಿ ನಡೆದಿದೆ. ಅಮೆರಿಕದ ಸಂಸತ್ತಿನ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನಿಗೆ ಭೇಟಿ ನೀಡಿದ್ದರ ವಿರುದ್ಧ ಚೀನಾ ತನ್ನ ಮಿಲಿಟರಿ ಸುವ್ಯವಸ್ಥಿತ ಯುದ್ಧ ನಡೆಯನ್ನು ಮುನ್ನಡೆಸಿದೆ.
ತೈವಾನಿನ ಉತ್ತರ, ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ತೈವಾನಿನ 12 ನಾಟಿಕಲ್ ಮೈಲು ಕಡಲು ರೇಖೆಯೊಳಗೇ ಚೀನಾದ ಯುದ್ಧೋನ್ಮಾದ ಜಲ ವಾಯು ಎರಡೂ ಕಡೆ ಗೋಚರಿಸಿತು. ದ್ವೀಪವನ್ನು ಸುತ್ತುವರಿದಂತೆ ಈ ಕಾರ್ಯಾಚರಣೆ ನಡೆಯಿತು ಎಂದು ನ್ಯಾಶನಲ್ ಡಿಫೆನ್ಸ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಮೆಂಗ್ ಕ್ಸಿಯಾಂಗ್ ಕಿಂಗ್ ರು ಚೀನಾದ ದೇಶೀಯ ಟೀವಿಗೆ ತಿಳಿಸಿದರು. ತೈವಾನ್ ಮೇಲೆ ಇದು ನಿಜವಾದ ದಾಳಿಯೇನೂ ಅಲ್ಲ ಎಂದೂ ಅವರು ತಿಳಿಸಿದರು.
“ಮೂಲ ಚೀನಾದಲ್ಲಿ ತೈವಾನನ್ನು ಸೇರಿಸಲು ಮುಂದಿನ ದಿನಗಳಲ್ಲಿ ಒಂದು ಸುಸ್ಥಿರ ಕಾರ್ಯಾಚರಣೆಗೆ ಇದು ಒಂದು ಉತ್ತಮ ವಾತಾವರಣವನ್ನು ನಿರ್ಮಿಸಿದೆ” ಎಂದೂ ಮೆಂಗ್ ಹೇಳಿದರು.
ತೈವಾನಿನ ಉತ್ತರ ಭಾಗದಲ್ಲಿ ಚೀನೀ ಪಡೆಗಳು ಆ ದೇಶದ ಪ್ರಮುಖ ಬಂದರು ಆದ ಕೀಲುಂಗ್ ಗೆ ದಿಗ್ಬಂಧನ ವಿಧಿಸಿ ಕೆಲವು ಕಾಲ ಮಿಲಿಟರಿ ಯುದ್ಧ ಕವಾಯತು ಕೈಗೊಂಡಿವೆ. ಕೋಶಿಯಿಂಗ್ ಬಂದರು ನಗರಕ್ಕೂ ಚೀನಾದ ದಾರಿ ಮಾತ್ರವಲ್ಲ, ಇತರ ದಾರಿಯೂ ಬಂದ್ ಆಗಿದೆ ಎಂದೂ ಮೆಂಗ್ ತಿಳಿಸಿದ್ದಾರೆ.