ಫಾಝಿಲ್ ಹತ್ಯೆ | ಇದುವರೆಗೂ ಸಂತ್ರಸ್ತರ ಮನೆಗೆ ಭೇಟಿ ನೀಡದ ಜಿಲ್ಲಾಡಳಿತ, ಶಾಸಕರು, ಉಸ್ತುವಾರಿ ಸಚಿವರು

Prasthutha|

ಮಂಗಳೂರು: ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಹತ್ಯೆಯ ಆರೋಪಿಗಳ ಬಂಧನವಾಗಿದ್ದು, ಆದರೆ ಇಲ್ಲಿಯವರೆಗೆ ಜಿಲ್ಲಾಧಿಕಾರಿ, ಸ್ಥಳೀಯ ಶಾಸಕರು ಭೇಟಿ ನೀಡದಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -


ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಶಾಸಕ ಉಮಾನಾಥ ಕೋಟ್ಯಾನ್, ಜಿಲ್ಲಾಡಳಿತ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಮೃತರ ಮನೆಗೆ ಭೇಟಿ ನೀಡಿಲ್ಲ. ಇವರಿಗೆ ಮನುಷ್ಯತ್ವವೂ ಇಲ್ಲದಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಮೃತ ಪ್ರವೀಣ್ ಮನೆಗೆ ಮುಖ್ಯಮಂತ್ರಿ ಬೊಮ್ಮಾಯಿ ಸಮೇತ ಸಚಿವರು, ಶಾಸಕರು ಎಲ್ಲರೂ ಭೇಟಿ ನೀಡಿದ್ದಾರೆ. ಆದರೆ ಫಾಝಿಲ್ ಮನೆಗೆ ಯಾರೂ ಭೇಟಿ ನೀಡಿಲ್ಲ. ಕೇವಲ ಹಿಂದೂ ಧರ್ಮದವರು ಸತ್ತರೆ ಮಾತ್ರ ಭೇಟಿ ನೀಡುತ್ತಾರೆ. ಸರ್ಕಾರ ಕೇವಲ ಹಿಂದೂಗಳಿಗೆ ಮಾತ್ರವೇ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -


ಫಾಝಿಲ್ ಹತ್ಯೆಗೆ ಸಂಬಂಧಿಸಿದಂತೆ ಸುರತ್ಕಲ್ ಕೃಷ್ಣಾಪುರ ನಿವಾಸಿ ಶ್ರೀನಿವಾಸ್ ಯಾನೆ ಶೀನು, ಕಟೀಲು ಕಲ್ವಾರ್ ನಿವಾಸಿ ಸುಹಾಸ್ ಶೆಟ್ಟಿ, ಸುರತ್ಕಲ್ ಕೃಷ್ಣಾಪುರ ನಿವಾಸಿ ಅಭಿ ಯಾನೆ ಅಭಿಷೇಕ್, ಸುರತ್ಕಲ್ ಕುಲಾಯಿ ನಿವಾಸಿ ಮೋಹನ್ ಮತ್ತು ಗಿರಿ ಎಂಬುವವರನ್ನು ಬಂಧಿಸಲಾಗಿದ್ದು, ಆಗಸ್ಟ್ 15ರ ತನಕ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.



Join Whatsapp