ಚಿಕ್ಕಮಗಳೂರು: ಕರಾವಳಿಯಲ್ಲಿ ನಡೆದ ಸರಣಿ ಹತ್ಯೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ವಿಫಲವಾದ ರಾಜ್ಯ ಸರ್ಕಾರದ ವಿರುದ್ದ ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಪಿಎಫ್ಐ ಚಿಕ್ಕ-ಮಗಳೂರು ಜಿಲ್ಲಾಧ್ಯಕ್ಷ ಚಾಂದ್ ಪಾಶಾ, ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ಹಿನ್ನೆಲೆಯಲ್ಲಿ ಒಂದು ತಲೆಗೆ ಹತ್ತು ತಲೆ ತೆಗೆಯಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿರುವ ಕಾಳಿ ಸ್ವಾಮಿ ಎಂಬಾತನ ವಿರುದ್ಧ ವಾಗ್ದಾಳಿ ನಡೆಸಿದರು.
ತಲೆ ತೆಗೆಯಲು ಕರೆ ಕೊಡುವ ಮೊದಲು ಒಂದು ಮದುವೆಯಾಗಿ ಮಕ್ಕಳನ್ನು ಹುಟ್ಟಿಸಿ ನಿಮ್ಮ ಗಂಡಸುತನ ಸಾಬೀತುಪಡಿಸಿ ಎಂದು ನಕಲಿ ಸ್ವಾಮಿ ಕಾಳಿ ಸ್ವಾಮಿಗೆ ಸವಾಲು ಹಾಕಿದರು.
ಪ್ರಮೋದ್ ಮುತಾಲಿಕನನ್ನು ಆರೆಸ್ಸೆಸ್, ಬಿಜೆಪಿ ಸಹಿತ ಎಲ್ಲಾ ಕಡೆಗಳಿಂದ ಓಡಿಸಿದರು. ಇದೀಗ ಎಲ್ಲೆಂದರಲ್ಲಿ ಹೋಗಿ ಹಿಂದೂ ಪರ ಎಂದು ಬೊಬ್ಬಿರಿಯುತ್ತಾ ಭಯೋತ್ಪಾದನಾ ಮಾತುಗಳನ್ನಾಡುತ್ತಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಳಿ ಸ್ವಾಮಿ ಎಂಬಾತ ನಮ್ಮದೇ ಜಿಲ್ಲೆಯವನಾಗಿದ್ದು ಇಂತಹ ನಕಲಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.