ಇನ್ನಷ್ಟು ಹತ್ಯೆ ಕುರಿತು ಕಾಳಿ ಸ್ವಾಮಿ ಹೇಳಿಕೆ: SDPIಯಿಂದ ದೂರು ದಾಖಲು

Prasthutha|

ಮಂಗಳೂರು: ಕಾಳಿ ಸ್ವಾಮಿಯ ಪ್ರಚೋದನಕಾರಿ ಹೇಳಿಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ SDPI ಮಂಗಳೂರು ದಕ್ಷಿಣ ಕ್ಷೇತ್ರ ಕಾರ್ಯದರ್ಶಿ ಸಿದ್ದೀಕ್ ಬೆಂಗರೆ, ಪಾಂಡೇಶ್ವರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

- Advertisement -

ತುಮಕೂರಿನಲ್ಲಿ ಜುಲೈ 29 ರಂದು ಕಾಳಿ ಸ್ವಾಮಿ, ಪತ್ರಕರ್ತರೊಂದಿಗೆ ಮಾತನಾಡುತ್ತಾ “ಸಾಬ್ರುರನ್ನು ನಿಜವಾಗಿಯೂ ಹೊಡೆದವರು ಯಾರೆಂದು ನಮಗೆ ಗೊತ್ತಿಲ್ಲ. ಒಂದು ವೇಳೆ ನಮ್ಮವರೇ ಆಗಿದ್ದರೆ ನಾನು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇನ್ನೂ ನೀವು ಒಂದೇ ಹೊಡೆದಿದ್ದೀನಿ ಅಂತ ಹೇಳುತ್ತಿದ್ದೀರಿ, ನಮ್ಮವರು ಹೊಡೆದಿದ್ರೆ ಇನ್ನೂ 9 ತುರ್ಕರ ತಲೆ ಬೇಕು ಒಂದು ವೇಳೆ ಹೊಡೆದದ್ದು ನಮ್ಮವರಲ್ಲ ಅಂತಾದ್ರೆ ಅವರಿಗೆ ಇನ್ನೂ ಮನಸ್ಥಿತಿ ಗಟ್ಟಿಯಾಗಿಲ್ಲ ಎಂದರ್ಥ ಹಂದಿಗಳಾ ಸಾದ್ಯವಾದರೆ ನನ್ನನ್ನು ಎತ್ತಿ ನೀವು ಹಂದಿ ನಾಯಿಗಳು ಒಂದು ತಲೆಗೆ 10 ತಲೆ ತೆಗೆಯದ್ದಿದ್ದರೆ ಸುಧಾರಿಸಲ್ಲ ಇತ್ಯಾದಿ ಹೇಳಿಕೆಯನ್ನು ಕಾಳಿ ಸ್ವಾಮಿ ನೀಡಿದ್ದಾರೆ. ಈ ಹೇಳಿಕೆ ಸಮಾಜದ ಶಾಂತಿ ಸೌಹಾರ್ದತೆ ಹಾಳು ಮಾಡಿ ಹಿಂದೂ ಮುಸ್ಲಿಂ ಸಮುದಾಯದ ನಡುವೆ ದ್ವೇಷ ಉಂಟು ಮಾಡಿಸಿ ಕೋಮು ಗಲಭೆಗೆ ಪ್ರಚೋದನೆಗೆ ಕಾರಣವಾಗಿದ್ದು, ಕಾಳಿ ಸ್ವಾಮಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರುದಾರ ಸಿದ್ದೀಕ್ ಬೆಂಗರೆ ಪೊಲೀಸರಲ್ಲಿ ಆಗ್ರಹಿಸಿದ್ದಾರೆ.

ಮಾತ್ರವಲ್ಲ , ಮೂವರು ಯುವಕರ ಹತ್ಯೆಯಿಂದ ಪ್ರಕ್ಷುಬ್ದಗೊಂಡ ಜಿಲ್ಲೆಯ ವಾತಾವರಣವನ್ನು ಶಾಂತಿ ಸುವ್ಯವಸ್ಥೆಗಾಗಿ ಅವಿರತ ಪರಿಶ್ರಮ ನಡೆಸುತ್ತಿರುವಾಗ ಕಾಳಿ ಸ್ವಾಮಿಯ ಇನ್ನಷ್ಟು ಹತ್ಯೆ ನಡೆಸುವ ಹೇಳಿಕೆ ಸಮಾಜದ ಶಾಂತಿ ಕದಡುವ ಹೇಳಿಕೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ



Join Whatsapp