ಗೋವಾ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಆಕೆಯ ಮಗಳು ಜೊಯಿಷ್ ಗೋವಾದಲ್ಲಿರುವ ರೆಸ್ಟೋರೆಂಟ್ ನ ಮಾಲೀಕರಲ್ಲ. ಅವರಿಗೆ ಪರವಾನಗಿ ನೀಡಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಸ್ಮೃತಿ ಇರಾನಿ ಅಥವಾ ಆಕೆಯ ಮಗಳು ಲೈಸನ್ಸ್ ಗಾಗಿ ಯಾವತ್ತೂ ಅರ್ಜಿ ಸಲ್ಲಿಸಿಲ್ಲ ಎಂದಿದೆ.
ತನ್ನ ಘನತೆಗೆ ಧಕ್ಕೆ ತರುವುದಕ್ಕಾಗಿ ಕಾಂಗ್ರೆಸ್ ತನ್ನ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿದೆ ಎಂದು ಸ್ಮೃತಿ ಇರಾನಿ ಕಾಂಗ್ರೆಸ್ ನಾಯಕರಾದ ಪವನ್ ಖೇರಾ, ಜೈರಾಮ್ ರಮೇಶ್ ಮತ್ತು ನೆಟ್ಟಾ ಡಿ ಸೋಜಾ ಅವರಿಗೆ ನೋಟಿಸ್ ಕಳುಹಿಸಿದ್ದರು. ತಮ್ಮ ಮತ್ತು ಮಗಳ ಮೇಲೆ ಆಧಾರರಹಿತ ಮತ್ತು ಸುಳ್ಳು ಆರೋಪ ಹೊರಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕರು ಕ್ಷಮೆಯಾಚಿಸಬೇಕು ಎಂದು ಬಿಜೆಪಿ ನಾಯಕಿ ಸ್ಮೃತಿ ಹೇಳಿದ್ದಾರೆ.
ಸ್ಮೃತಿ ಪುತ್ರಿ ಜೋಯಿಷ್ ಗೋವಾದಲ್ಲಿ ಅಕ್ರಮ ಬಾರ್ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಕೇಂದ್ರ ಸಚಿವೆ ಮತ್ತು ಆಕೆಯ ಪುತ್ರಿ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ ಪೋಸ್ಟ್ ಅಳಿಸುವಂತೆ ಕಾಂಗ್ರೆಸ್ ನಾಯಕರಿಗೆ ಕೋರ್ಟ್ ಆದೇಶಿಸಿತ್ತು.