ಫಾಝಿಲ್ ಹತ್ಯೆ ಪ್ರಕರಣ: ಕೃತ್ಯಕ್ಕೆ ಬಳಸಿದ ಕಾರು ಮಾಲಕನ ಬಂಧನ !

Prasthutha|

ಮಂಗಳೂರು: ಇತ್ತೀಚೆಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದ ಫಾಝಿಲ್ ಹತ್ಯೆಗೆ ಬಳಸಿದ ಹುಂಡೈ ಇಯೋನ್ ಕಾರಿನ ಮಾಲಕ ಸುರತ್ಕಲ್ ಕೋಡಿಕೆರೆ ನಿವಾಸಿ ಅಜಿತ್ ಕ್ರಾಸ್ಟಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿವೆ.

- Advertisement -

ಫಾಝಿಲ್ ಹಂತಕರು ಬಳಸಿದ್ದ ಕಾರಿನ ಡ್ರೈವರ್ ಅಜಿತ್ ಆಗಿದ್ದು, ಹಂತಕರು ಕೃತ್ಯ ಯಶಸ್ವಿಯಾಗಿ ಪೂರ್ತಿ ಆಗುವವರೆಗೂ ಕಾರಿನಲ್ಲೇ ಕಾದು ಕುಳಿತಿದ್ದ. ಕೊಲೆ ನಡೆಸಿದ ಬಳಿಕ ಹಂತಕರನ್ನು ಪಾರು ಮಾಡುವಲ್ಲಿ ನೆರವಾಗಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿವೆ.

ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಅಜಿತ್ ಕ್ರಾಸ್ಟಾ ಅವರು ಹಿಂದೆ ಖಾಸಗಿ ಬಸ್’ನಲ್ಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದು, ಮದುವೆ ಆದ ನಂತರ ಕಾರನ್ನು ಬಾಡಿಗೆಗೆ ಕೊಡುವ ಬಿಸಿನೆಸ್ ಅನ್ನು ಪ್ರಾರಂಭಿಸಿದ್ದರು. ಅಜಿತ್ ಬಳಿ ಸ್ವಿಫ್ಟ್ ಡಿಸೈರ್, ಇಯೋನ್ ಸೇರಿದಂತೆ ಒಟ್ಟು ಮೂರು ಕಾರುಗಳನ್ನು ಹೊಂದಿದ್ದು, ಅವುಗಳನ್ನು ಬಾಡಿಗೆಗೆ ನೀಡುತ್ತಿದ್ದರು. ಈ ಮಧ್ಯೆ ಫಾಝಿಲ್ ಹತ್ಯೆಗೆ ಬಳಸಲಾದ ಇಯೋನ್ ಕಾರನ್ನು ಅಜಿತ್ ಬಳಿಯಿಂದ ತನ್ನ ಪರಿಚಯಸ್ಥರೇ ಬಾಡಿಗೆಗೆ ಪಡೆದುಕೊಂಡು ದುಷ್ಕೃತ್ಯವೆಸಗಿದ್ದಾರೆ ಎಂದು ಹೇಳಲಾಗಿದೆ.

- Advertisement -

ಬಂಧಿತ ಅಜಿತ್ ನೀಡಿದ ಮಾಹಿತಿ ಆಧಾರ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು 4 ತಂಡಗಳನ್ನು ರಚಿಸಿ ಹುಡುಕಾಟ ಆರಂಭಿಸಿದ್ದಾರೆ. ಇನ್ನು ಫಾಝಿಲ್ ಕೊಲೆಯಲ್ಲಿ ಕಾರು ಮಾಲಕ ಅಜಿತ್ ಕ್ರಾಸ್ಟಾ ಎಂಬಾತನ ಪಾತ್ರದ ಬಗ್ಗೆ ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಲಿದೆ.



Join Whatsapp