ವಿಧಾನಪರಿಷತ್ ಉಪಚುನಾವಣೆ: ಬಿಜೆಪಿಯಿಂದ ಬಾಬುರಾವ್ ಚಿಂಚನಸೂರ್ ಅಭ್ಯರ್ಥಿ

Prasthutha|

ಬೆಂಗಳೂರು: ವಿಧಾನಪರಿಷತ್ತಿನಲ್ಲಿ ಸಿ.ಎಂ.ಇಬ್ರಾಹಿಂ ಅವರಿಂದ ತೆರವಾದ ಸ್ಥಾನವನ್ನು ತುಂಬಲು ನಡೆಯಲಿರುವ ಉಪಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ)ವು ಕಬ್ಬಲಿಗ ಸಮುದಾಯದ ನಾಯಕ ಬಾಬುರಾವ್ ಚಿಂಚನಸೂರ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಶನಿವಾರ ಘೋಷಿಸಿದೆ.

- Advertisement -

ಬಿಜೆಪಿಯ ಕೇಂದ್ರ ಚುನಾವಣಾ ಆಯೋಗ, ಕರ್ನಾಟಕ ವಿಧಾನ ಪರಿಷತ್ತಿಗೆ ಚಿಂಚನಸೂರ್ ಅವರ ಹೆಸರನ್ನು ಘೋಷಿಸಿದೆ. ಚಿಂಚನಸೂರ್ ಅವರ ಆಯ್ಕೆಯನ್ನು 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಿರಿಯ ವಕ್ತಾರ ಎಂ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಅವರು ನೀಡಿದ ಕೊಡುಗೆಗಳಿಗಾಗಿ ಬಿಜೆಪಿಯು ಪ್ರತಿಫಲವಾಗಿ ಪ್ರಕಟಿಸಿದೆ ಎನ್ನಲಾಗಿದೆ.

MLC bypoll: BJP gives ticket to Baburao Chinchanasur | udayavani

1989ರಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದಲ್ಲಿ ಜನತಾ ಪಕ್ಷದ ವಿಶ್ವನಾಥ್ ಪಾಟೀಲ್ ಹೆಬ್ಬಾಳ್ ಅವರನ್ನು ಸೋಲಿಸುವ ಮೂಲಕ ಚಿಂಚನಸೂರ್ ಅವರು ಕಾಂಗ್ರೆಸ್ ಸದಸ್ಯರಾಗಿ ವಿಧಾನಸಭೆ ಪ್ರವೇಶಿಸಿದರು. ಅವರು ಮುಂದಿನ ಎರಡು ವಿಧಾನಸಭಾ ಚುನಾವಣೆಗಳಲ್ಲಿ (1994 ಮತ್ತು 1999) ಅದೇ ಕ್ಷೇತ್ರದಿಂದ ಮತ್ತು ಅದೇ ಅಭ್ಯರ್ಥಿಯ ವಿರುದ್ಧ ಹ್ಯಾಟ್ರಿಕ್ ಗೆಲುವನ್ನು ದಾಖಲಿಸಿದರು. ಎಸ್.ಎಂ. ಕೃಷ್ಣ ಅವರ ಮಂತ್ರಿಮಂಡಲದಲ್ಲಿ ಸಚಿವರಾಗಿ ಅವರು ಏಳು ಇಲಾಖೆಗಳನ್ನು ನಿರ್ವಹಿಸಿದ್ದರು.

- Advertisement -

ಅವರು 2004 ರ ವಿಧಾನಸಭಾ ಚುನಾವಣೆಯಲ್ಲಿ ಚಿತ್ತಾಪುರದಿಂದ ಹೆಬ್ಬಾಳದ ವಿರುದ್ಧ ಸೋತು ಮತ್ತು ಮುಂದಿನ ಎರಡು ಚುನಾವಣೆಗಳಲ್ಲಿ ಗುರುಮಿಟ್ಕಲ್ ನಿಂದ ವ (2008 ಮತ್ತು 2013) ಗೆದ್ದರು. 2018 ರ ವಿಧಾನಸಭಾ ಚುನಾವಣೆಯಲ್ಲಿ ಅವರು ಮತ್ತೆ ಗುರುಮಿಟ್ಕಲ್ ನಿಂದ ಸ್ಪರ್ಧಿಸಿ ಜನತಾದಳದ ಅಭ್ಯರ್ಥಿ ನಾಗನಗೌಡ ಕಂದಕೂರ್ ವಿರುದ್ಧ ಸೋತಿದ್ದರು.

2019ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ 2019ರ ಲೋಕಸಭಾ ಚುನಾವಣೆಯಲ್ಲಿ ಖರ್ಗೆ ವಿರುದ್ಧ ಕೆಲಸ ಮಾಡಿದ ಮಲಿಕಯ್ಯ ಗುತ್ತೇದಾರ್, ಉಮೇಶ್ ಜಾಧವ್ ಮತ್ತು ಅಂಬಾರಾಯ ಅಷ್ಟಗಿ ಅವರಂತಹ ಈ ಭಾಗದ ಹಲವಾರು ಕಾಂಗ್ರೆಸ್ ನಾಯಕರಲ್ಲಿ ಚಿಂಚನಸೂರ್ ಕೂಡಾ ಒಬ್ಬರಾಗಿದ್ದರು. ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಮತ್ತು ನಂತರ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಗಳಿಗೆ ಭಾಜನರಾಗಿದ್ದರು.



Join Whatsapp