ರಷ್ಯಾ- ಉಕ್ರೇನ್ ಯುದ್ಧ; ಜಾಗತಿಕ ಸಮುದಾಯಗಳ ವಿರೋಧದ ನಡುವೆಯೂ ಪಟ್ಟುಬಿಡದ ರಷ್ಯಾ

Prasthutha|

ಮಾಸ್ಕೊ: ಉಕ್ರೇನ್‌ನಲ್ಲಿನ ಸದ್ಯದ ಪರಿಸ್ಥಿತಿ ಹಾಗೂ ಜಾಗತಿಕ ಆಹಾರ ಭದ್ರತೆ ಮತ್ತು ದ್ವಿಪಕ್ಷೀಯ ಸಂಬಂಧಗಳ ಸಮಸ್ಯೆಗಳ ಬಗ್ಗೆ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ದೂರವಾಣಿ ಮೂಲಕ ಚರ್ಚಿಸಿದ್ದಾರೆ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

- Advertisement -

ಉಕ್ರೇನ್‌ನಲ್ಲಿ ನಡೆಯುತ್ತಿರುವ ವಿಶೇಷ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ರಷ್ಯಾದ ವಾದವನ್ನು ಮಂಡಿಸಿದ ಲಾವ್ರೊವ್, ತಮ್ಮ ಗುರಿಗಳನ್ನು ಸಾಧಿಸಿಯೇ ತೀರುತ್ತೇವೆ ಎಂದು ಹೇಳಿರುವುದಾಗಿ ರಷ್ಯಾದ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಆಮದು, ಹಣಕಾಸು ಮತ್ತು ತೈಲ ನಿರ್ಬಂಧಗಳ ನಡುವೆಯೂ ತನ್ನ ಪಟ್ಟುಬಿಡದ ರಷ್ಯಾ, ಜಾಗತಿಕ ಸಮುದಾಯಗಳ ವಿರೋಧದ ನಡುವೆಯೂ ರಷ್ಯಾ, ಉಕ್ರೇನ್ ಮೇಲೆ ಯುದ್ಧ ಮುಂದುವರಿಸಿದೆ.

- Advertisement -

ಈ ನಡುವೆ ರಷ್ಯಾ ಆಕ್ರಮಿತ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟ 50ಕ್ಕೂ ಹೆಚ್ಚು ಉಕ್ರೇನ್ ಯುದ್ಧ ಖೈದಿಗಳ ಸಾವಿನ ಬಗ್ಗೆ ತನಿಖೆ ನಡೆಸಲು ವಿಶ್ವಸಂಸ್ಥೆ ಮತ್ತು ರೆಡ್‌ಕ್ರಾಸ್‌ ತನಿಖೆ ನಡೆಸಬೇಕೆಂದು ಉಕ್ರೇನ್ ಒತ್ತಾಯಿಸಿದೆ.



Join Whatsapp