ಲಕ್ನೋ: ವಿದ್ಯಾರ್ಥಿಗಳ ಮುಖಾಂತರ ಕುರ್ಚಿಗಳನ್ನಿರಿಸಿ ಅದರ ಮೇಲೆ ಹತ್ತಿಕೊಂಡು ಶಿಕ್ಷಕಿಯೊಬ್ಬರು ಪ್ರವಾಹ ಪೀಡಿತ ಶಾಲೆಗೆ ಪ್ರವೇಶಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಶಿಕ್ಷಕಿಯನ್ನು ಅಮಾನತುಗೊಳಿಸಿರುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.
ಶಾಲಾ ಆವರಣದ ಪ್ರವೇಶದ್ವಾರದಲ್ಲಿ ಶಿಕ್ಷಕಿ ಜಲಾವೃತವಾದ ಪ್ರದೇಶವನ್ನು ದಾಟಲು ಕುರ್ಚಿಗಳ ಮೇಲೆ ಹತ್ತುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ. ಸಮವಸ್ತ್ರದಲ್ಲಿದ್ದ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಒದ್ದೆಯಾಗದೆ ದಾಟಲು ಕುರ್ಚಿಗಳನ್ನು ಸಾಲಿನಲ್ಲಿ ನಿಲ್ಲಿಸಿ ಮತ್ತು ಅವುಗಳನ್ನು ಹಿಡಿದಿರುವುದು ವೀಡಿಯೋದಲ್ಲಿ ಕಂಡು ಬಂದಿದೆ.