“ಹಿಂದುತ್ವಕ್ಕಾಗಿ ಇನ್ನು 9 ಮುಸ್ಲಿಮರ ತಲೆ ಬೇಕು“
ಬೆಂಗಳೂರು: ನಿನ್ನೆ ಫಾಝಿಲ್ ಹತ್ಯೆ ಮಾಡಿದವರಿಗೆ ಅಭಿನಂದನೆ ಎಂದು ಕುಖ್ಯಾತ ಕಾಳಿ ಸ್ವಾಮಿ ಮನುಷ್ಯತ್ವ ಇಲ್ಲದ ರೀತಿ ಮಾತನಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಲು ಸಾಲು ಹತ್ಯೆಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫಾಝಿಲ್ ಹತ್ಯೆ ಮಾಡಿದವರು ಯಾರು ಎಂದು ಗೊತ್ತಿಲ್ಲ, ಹತ್ಯೆ ನಡೆಸಿದವರು ಸಂಘಪರಿವಾರಕ್ಕೆ ಸೇರಿದವರಾದರೆ ಅವರಿಗೆ ಅಭಿನಂದನೆ ಹೇಳುತ್ತೇನೆ. ಫಾಝಿಲ್ ಹತ್ಯೆ ಮಾಡಿದವರು ಮುಸ್ಲಿಮರಾಗಿದ್ದರೆ, ಹಿಂದುಗಳಿಗೆ ಇನ್ನೂ ಮನಸ್ಥಿತಿ ಗಟ್ಟಿ ಇದೆ ಎಂದು ಹೇಳಿದ್ದಾರೆ.
ಒಂದು ಕೊಲೆ ಸಾಕಾಗಲ್ಲ, ಹಿಂದುತ್ವಕ್ಕಾಗಿ 9 ಮುಸ್ಲಿಮರ ತಲೆ ಬೇಕು ಎಂದು ಪ್ರಚೋದನೆ ನೀಡಿದ್ದಾರೆ.
ಕಾಳಿ ಸ್ವಾಮಿ ಮತ್ತೆ ಕೋಮು ಪ್ರಚೋದನೆ ನೀಡಿದ್ದು, ಬಂಧನ ಮಾಡಬೇಕು ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.