ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆ; 8 ಮಂಡಲಗಳ ಅಧ್ಯಕ್ಷರ ಸಹಿತ 207 ಮಂದಿ ರಾಜೀನಾಮೆ

Prasthutha|

ದಾವಣಗೆರೆ: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ರಾಜೀನಾಮೆ ನೀಡಲು ಮುಂದಾಗಿದ್ದ ಯುವಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರನ್ನು ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಹನಗವಾಡಿ ಸಮಾಧಾನಪಡಿಸಿದ್ದಾರೆ.

- Advertisement -

ಜಯದೇವ ವೃತ್ತದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿದ ವೇಳೆ ಜಿಲ್ಲಾ ಮೋರ್ಚಾ ಹಾಗೂ 8 ಮಂಡಲದ ಅಧ್ಯಕ್ಷರು ಸೇರಿ ಒಟ್ಟು 207 ಜನ ಸದಸ್ವತ್ವಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಪಕ್ಷದ ಕಚೇರಿಗೆ ಹೋದಾಗ ವೀರೇಶ್ ಹನಗವಾಡಿ ಅವರು ಅದನ್ನು ಅಂಗೀಕರಿಸಿದೇ ‘ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ಮುಂದುವರಿಯಬೇಕು’ ಎಂದು ಮನವೊಲಿಸಿದರು.

‘ಹಿಂದುತ್ವದ ಮೇಲೆ ಅಧಿಕಾರಕ್ಕೆ ಬಂದ ಸರ್ಕಾರ ಕಾರ್ಯಕರ್ತರ ನಿರಂತರ ಕೊಲೆಗೆ ಸೂಕ್ತ ಉತ್ತರ ನೀಡುತ್ತಿಲ್ಲ. ಮಾಜಿ ಮೇಯರ್ ಎಸ್.ಟಿ. ವೀರೇಶ್, ‘ಕನ್ಹಯ್ಯಲಾಲ್, ಪರೇಶ್, ರಾಜು, ಹರ್ಷ ನಂತರ ಇದೀಗ ಪ್ರವೀಣ್ ನೆಟ್ಟಾರು ಹತ್ಯೆಯಾಗಿದೆ. ಹಿಂದೂಗಳ ಹತ್ಯೆಗೆ ಕೊನೆ ಎಂದು? ಬಿಜೆಪಿ ಕಾರ್ಯಕರ್ತರು ಹಿಂದುತ್ವಕ್ಕಾಗಿ ಕೆಲಸ ಮಾಡುತ್ತಿದ್ದಾರೆ, ಅಧಿಕಾರಕ್ಕಲ್ಲ. ಕಾರ್ಯಕರ್ತರ ಸಹನೆ ಕಟ್ಟೆಯೊಡೆದಿದೆ. ಇನ್ನೆಷ್ಟು ಕಾರ್ಯಕರ್ತರ ಶ್ರದ್ಧಾಂಜಲಿಯಾಗಬೇಕು’ ಎಂದು ಕಾರ್ಯಕರ್ತರು ಸರ್ಕಾರದ ವಿರುದ್ಧಆಕ್ರೋಶ ವ್ಯಕ್ತಪಡಿಸಿದರು.



Join Whatsapp