ಬಿಹಾರ ಭಯೋತ್ಪಾದನಾ ಜಾಲ ಆರೋಪ: ಬಂಧಿತರು ವಿದೇಶೀ ನಿಧಿ ಸ್ವೀಕರಿಸಿದ್ದರು ಎಂಬ ಆರೋಪದಲ್ಲಿ ಹುರುಳಿಲ್ಲ – ಪೊಲೀಸ್

Prasthutha|

- Advertisement -

ಪಾಟ್ನಾ: ಪುಲ್ವಾರಿ ಶರೀಫ್ ಭಯೋತ್ಪಾದನಾ ಜಾಲ ಪ್ರಕರಣದಲ್ಲಿ ಬಂಧಿತರು ವಿದೇಶಿ ದೇಣಿಗೆಯನ್ನು ಸ್ವೀಕರಿಸಿದ್ದಾರೆ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದು ಪಾಟ್ನಾ ಹಿರಿಯ ಪೊಲೀಸ್ ಅಧೀಕ್ಷಕ ಎಂ.ಎಸ್ ದಿಲ್ಲೋನ್ ಸ್ಪಷ್ಟಪಡಿಸಿದ್ದಾರೆ.
ಭಯೋತ್ಪಾದನಾ ಚಟುವಟಿಕೆ ಆರೋಪದಲ್ಲಿ ಬಂಧಿತರಾದವರ ಪೈಕಿ ಓರ್ವ ಕತ್ತಾರ್ ಮೂಲದ ಸಂಘಟನೆಯಿಂದ ಕ್ರಿಪ್ಟೋ ಕರೆನ್ಸಿ ರೂಪದಲ್ಲಿ ಹಣ ಪಡೆದಿದ್ದ ಎಂದು ಆರೋಪಿಸಲಾಗಿತ್ತು.


ಪ್ರಕರಣದ ಆರೋಪಿಯೊಬ್ಬ ವಿದೇಶಿ ಸಂಸ್ಥೆಯಿಂದ ಕ್ರಿಪ್ಟೋಕರೆನ್ಸಿ ರೂಪದಲ್ಲಿ ಹಣ ಪಡೆದಿರುವುದು ತನಿಖೆಯ ವೇಳೆ ಸಂಗ್ರಹಿಸಿದ ಪುರಾವೆಗಳಿಂದ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು.
ಆದರೆ ಕ್ರಿಪ್ಟೊಕರೆನ್ಸಿ ರೂಪದಲ್ಲಿ ಹಣ ಪಡೆದಿರುವ ಆರೋಪ ಸತ್ಯಕ್ಕೆ ದೂರವಾದುದು ಎಂದು ಹಿರಿಯ ಪೊಲೀಸ್ ಅಧೀಕ್ಷಕರು ಸ್ಪಷ್ಟಪಡಿಸಿದ್ದಾರೆ.
ದೇಶವಿರೋಧಿ ಚಟುವಟಿಕೆಗಳಿಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಆರೋಪಿಸಿ ಬಿಹಾರದ ಪುಲ್ವಾರಿ ಶರೀಫ್ನ ವಿವಿಧೆಡೆ ದಾಳಿ ನಡೆಸಿದ್ದ ಪೊಲೀಸರು ಈವರೆಗೆ ಒಟ್ಟು ಐವರನ್ನು ಬಂಧಿಸಿದ್ದು, 26 ಮಂದಿಯ ವಿರುದ್ಧ ಎಫ್ ಐಆರ್ ದಾಖಲಿಸಿದ್ದರು. ಬಂಧಿತರ ಪೈಕಿ ಓರ್ವರು ಜಾರ್ಖಂಡ್ನ ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದಾರೆ.

- Advertisement -


ದಾಳಿ ವೇಳೆ ಹಲವು ವಸ್ತುಗಳು ಲಭ್ಯವಾಗಿದ್ದು, ಪ್ರಕರಣಕ್ಕೂ ಪಿಎಫ್ ಐ ಮತ್ತು ಎಸ್ಡಿಪಿಐ ಗೆ ತಳುಕು ಹಾಕಿ ಹಲವು ವರದಿಗಳು ಪ್ರಸಾರಗೊಂಡಿದ್ದವು.



Join Whatsapp