ಶ್ರೀಲಂಕಾ ಅಧ್ಯಕ್ಷರ ನಿವಾಸದಿಂದ ಕಳ್ಳತನ: ಮೂವರ ಬಂಧನ

Prasthutha|

ಕೊಲೊಂಬೋ: ಶ್ರೀಲಂಕಾದಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಅಧ್ಯಕ್ಷರ ನಿವಾಸದಿಂದ ಕದ್ದ 40 ಚಿನ್ನ ಲೇಪಿತ ಹಿತ್ತಾಳೆ ಸಾಕೆಟ್ ಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮೂವರನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ.

- Advertisement -

ಜುಲೈ 9ರಂದು ಮಾಜಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರ ಅಧಿಕೃತ ನಿವಾಸ ಮತ್ತು ಮಾಜಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಖಾಸಗಿ ನಿವಾಸವನ್ನು ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಆಕ್ರಮಿಸಿಕೊಂಡಿದ್ದರು.

ಜುಲೈ 9 ರಂದು ಕೋಟೆಯ ಅಧ್ಯಕ್ಷರ ಭವನವನ್ನು ಪ್ರವೇಶಿಸಿದ ಮೂವರು 40 ಚಿನ್ನದ ಲೇಪಿತ ಹಿತ್ತಾಳೆ ಸಾಕೆಟ್ ಗಳನ್ನು ಕಳವು ಮಾಡಿದ್ದಾರೆ. ಭಾನುವಾರ ಕದ್ದ ವಸ್ತುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ವೆಲಿಕಾಡಾ ಪೊಲೀಸರು ಶಂಕಿತರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

ಬಂಧಿತ ಆರೋಪಿಗಳು 28, 34 ಮತ್ತು 37 ವರ್ಷ ವಯಸ್ಸಿನವರಾಗಿದ್ದು, ರಾಜಗಿರಿಯ ಒಬೆಶೇಖರಪುರದ ನಿವಾಸಿಗಳಾಗಿದ್ದಾರೆ. ಈ ಮೂವರು ಮಾದಕ ವ್ಯಸನಿಗಳಾಗಿರಬಹುದು ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗಳ ತನಿಖೆಯನ್ನು ನಿರ್ವಹಿಸುತ್ತಿರುವ ಕೊಲಂಬೊ (ಉತ್ತರ) ಅಪರಾಧ ತನಿಖಾ ವಿಭಾಗಕ್ಕೆ ಅವರನ್ನು ಹಸ್ತಾಂತರಿಸಲಾಗುವುದು ಎಂದು ವರದಿ ತಿಳಿಸಿದೆ. ಪ್ರಾಥಮಿಕ ತನಿಖೆಗಳ ಆಧಾರದ ಮೇಲೆ, ಅಪರೂಪದ ಕಲಾಕೃತಿಗಳು ಸೇರಿದಂತೆ ಕನಿಷ್ಠ 1,000 ಬೆಲೆಬಾಳುವ ವಸ್ತುಗಳು ಅಧ್ಯಕ್ಷೀಯ ಅರಮನೆ ಮತ್ತು ಪ್ರಧಾನ ಮಂತ್ರಿಯ ಅಧಿಕೃತ ನಿವಾಸದಿಂದ ಕಾಣೆಯಾಗಿವೆ. ತನಿಖೆಯನ್ನು ಪ್ರಾರಂಭಿಸಲು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ

ಹೊಸದಾಗಿ ಚುನಾಯಿತರಾದ ಅಧ್ಯಕ್ಷ ವಿಕ್ರಮಸಿಂಘೆ ಅವರು ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಗಳನ್ನು ಶಾಂತಿಯುತವಾಗಿ ನಡೆಸುವ ಹಕ್ಕುಗಳನ್ನು ಗೌರವಿಸುವುದಾಗಿ ಹೇಳಿದ್ದಾರೆ, ಆದರೆ ಮತ್ತೊಂದು ಸರ್ಕಾರಿ ಕಟ್ಟಡವನ್ನು ಆಕ್ರಮಿಸಲು ಬಿಡುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಜನರು ಸಾರ್ವಜನಿಕ ಸೌಲಭ್ಯಗಳಿಗೆ ಮುತ್ತಿಗೆ ಹಾಕುವುದನ್ನು ಮತ್ತು ಸಂಸತ್ತಿಗೆ ಅಡ್ಡಿಪಡಿಸುವುದನ್ನು ತಡೆಯಲು ಅಗತ್ಯವಿರುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಶ್ರೀಲಂಕಾದ ಸಶಸ್ತ್ರ ಪಡೆಗಳು ಮತ್ತು ಪೊಲೀಸರಿಗೆ ಅಧಿಕಾರ ನೀಡಿದ್ದೇನೆ ಎಂದು ವಿಕ್ರಮಸಿಂಘೆ ಹೇಳಿದರು.

ಸರ್ಕಾರಿ ಕಟ್ಟಡಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಕಾನೂನುಬಾಹಿರವಾಗಿದೆ ಎಂದು ಅವರು ಹೇಳಿದ್ದಾರೆ, ಅವುಗಳನ್ನು ಆಕ್ರಮಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.



Join Whatsapp