ಖಿನ್ನತೆಯ ಬಳಿಕ ಹಿಜಾಬ್ ಧರಿಸಲು ನಿರ್ಧಾರ: ಮಾಜಿ ನಟಿ ಸನಾ ಖಾನ್

Prasthutha|

ನವದೆಹಲಿ: ಖ್ಯಾತ ಬಾಲಿವುಡ್ ನಟಿ ಸನಾ ಖಾನ್ ಅವರು ಯಶಸ್ಸಿನ ಹೊರತಾಗಿಯೂ, ಖಿನ್ನತೆ ಮತ್ತು ಆತಂಕ ಸಮಸ್ಯೆಯ ಬಳಿಕ ಹಿಜಾಬ್ ಧರಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

- Advertisement -

ಸಖಾ ಖಾನ್ ಮತ್ತು ಪತಿ ಇತ್ತೀಚೆಗೆ ಹಜ್ ಯಾತ್ರೆ ಪೂರೈಸಿ ಮುಂಬೈಗೆ ಮರಳಿದ್ದು, ಮಾಜಿ ನಟಿ ಶೋಬಿಝ್ ನಿಂದ ದೂರ ಸರಿಯಲು ಏಕೆ ಆರಿಸಿಕೊಂಡರು ಎಂಬುದರ ಕುರಿತು ಮಾತನಾಡುವುದು ವೀಡಿಯೋದಲ್ಲಿ ಕಾಣಬಹುದು. ಅದರಲ್ಲಿ ಆಕೆ “ನನ್ನ ಹಿಂದಿನ ಜೀವನದಲ್ಲಿ ನಾನು ಸಹಜವಾಗಿ ಹೆಸರು, ಕೀರ್ತಿ, ಹಣ ಎಲ್ಲವನ್ನೂ ಹೊಂದಿದ್ದೆ. ನಾನು ಏನು ಬೇಕಾದರೂ ಮತ್ತು ಎಲ್ಲವನ್ನೂ ಮಾಡಬಲ್ಲೆ ಎಂದು ಭಾವಿಸಿದ್ದೆ. ಆದರೆ ನನ್ನ ಹೃದಯದಲ್ಲಿ ಶಾಂತಿ ಮಾತ್ರ ಇಲ್ಲದಾಗಿತ್ತು. ನಾನು ಎಲ್ಲವನ್ನೂ ಹೊಂದಿದ್ದರೂ, ಯಾಕೆ ಸಂತೋಷವಾಗಿಲ್ಲ? ಅಂದು ತುಂಬಾ ಖಿನ್ನತೆಯ ದಿನಗಳು ನನ್ನನ್ನು ಆವರಿಸಿದ್ದವು. ಆ ಸಮಯದಲ್ಲಿ ಅಲ್ಲಾಹನ ಸಂದೇಶದ ದಿನಗಳನ್ನು ಅವನ ಚಿಹ್ನೆಗಳ ಮೂಲಕ ನಾನು ಕಂಡಿದ್ದೆ.” ಎಂದು ತಿಳಿಸಿದ್ದಾರೆ.

ತನ್ನ ಜೀವನವನ್ನು ಬದಲಾಯಿಸಿದ ಬಗ್ಗೆ ಮಾತನಾಡುತ್ತಾ ಸನಾ ಖಾನ್, ” ನನಗೆ ಇನ್ನೂ ನೆನಪಿದೆ.. ಅದು 2019 ರ ರಂಝಾನ್ ಸಮಯ. ಆಗ ನಾನು ಕನಸಿನಲ್ಲಿ ಸಮಾಧಿಯನ್ನು ನೋಡುತ್ತಿದ್ದೆ. ನಾನು ಸುಡುವ, ಜ್ವಲಿಸುವ ಸಮಾಧಿಯನ್ನು ನೋಡುತ್ತಿದ್ದೆ ಮತ್ತು ನಾನು ಖಾಲಿ ಸಮಾಧಿಯನ್ನು ನೋಡಲಿಲ್ಲ ಬದಲಾಗಿ ನಾನೇ ನನ್ನನ್ನೇ ನೋಡಿದ್ದೆ. ನಾನು ಬದಲಾಗದಿದ್ದರೆ ನನ್ನ ಅಂತ್ಯ ಇದೇ ಎಂದು ದೇವರು ನನಗೆ ನೀಡುತ್ತಿರುವ ಸಂಕೇತವೆಂದು ನಾನು ಭಾವಿಸಿದೆ. ಅದು ನನಗೆ ಸ್ವಲ್ಪ ಆತಂಕವನ್ನುಂಟುಮಾಡಿತು.

- Advertisement -

ಇದರಿಂದ ಹೊರಬರಲು ನಾನು ಎಲ್ಲಾ ಪ್ರೇರಕ ಇಸ್ಲಾಮಿಕ್ ಭಾಷಣಗಳನ್ನು ಕೇಳುತ್ತಿದ್ದೆ ಮತ್ತು ಒಂದು ರಾತ್ರಿ ನಾನು ಕುರ್ ಆನ್ ಅನ್ನು ಓದಿದೆ” ಎಂದು ನೆನೆಸಿದರು.



Join Whatsapp