ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಪತ್ರಿಕೆಗಳು, ಟೆಲಿವಿಷನ್ ಚಾನೆಲ್ ಗಳು ಮತ್ತು ವೆಬ್ ಪೋರ್ಟಲ್ ಗಳಲ್ಲಿನ ಜಾಹೀರಾತುಗಳಿಗಾಗಿ ಮಾತ್ರ ನರೇಂದ್ರ ಮೋದಿ ಸರ್ಕಾರವು ಬರೋಬ್ಬರಿ 911.17 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ರಾಜ್ಯಸಭೆಗೆ ತಿಳಿಸಿದ್ದಾರೆ.
ಕಾಂಗ್ರೆಸ್ ಸಂಸದ ದಿಗ್ವಿಜಯ್ ಸಿಂಗ್ ಅವರ ಅನ್ಸ್ಟಾರ್ಡ್ ಪ್ರಶ್ನೆಗೆ ಉತ್ತರಿಸಿದ ಠಾಕೂರ್, ಮುದ್ರಣ, ದೂರದರ್ಶನ ಮತ್ತು ಆನ್ಲೈನ್ ಜಾಹೀರಾತುಗಳಿಗಾಗಿ 2019-20ರ ಆರ್ಥಿಕ ವರ್ಷದಿಂದ 2022ರ ಜೂನ್ ವರೆಗೆ ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ಸ್ ಈ ಜಾಹೀರಾತಿಗೆಲ್ಲಾ ಹಣ ಪಾವತಿಸಿದೆ ಎಂದು ಹೇಳೀದ್ದಾರೆ.
ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ ಖರ್ಚು ಮಾಡಿದ ಹಣವನ್ನು ವರ್ಷವಾರು ವಿಂಗಡಿಸಿದ ಅವರು ಮೋದಿ ಸರಕಾರ ತನ್ನ ಎರಡನೇ ಅವಧಿಯಲ್ಲಿ ಜಾಹೀರಾತಿಗಾಗಿ ಖರ್ಚು ಮಾಡಿದ ಮೊತ್ತವನ್ನು ವಿವರಿಸದರು.
2019-20ರಲ್ಲಿ 270 ಟಿವಿ ಚಾನೆಲ್ ಗಳಿಗೆ 98.69 ಕೋಟಿ ರೂ., 2021-21ರಲ್ಲಿ 318 ಚಾನೆಲ್ ಗಳಿಗೆ 69.81 ಕೋಟಿ ರೂ., 2021-22ರಲ್ಲಿ 265 ಚಾನೆಲ್ ಗಳಿಗೆ 29.3 ಕೋಟಿ ರೂ., ಪ್ರಸಕ್ತ ಹಣಕಾಸು ವರ್ಷದಲ್ಲಿ ಜೂನ್ ವರೆಗೆ 1.96 ಕೋಟಿ ರೂ. ಜಾಹೀರಾತಿಗಾಗಿ ವ್ಯಯಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಪತ್ರಿಕೆಯಲ್ಲಿ ನೀಡಲಾಗುವ ಜಾಹೀರಾತಿಗಳಿಗಾಗಿ 690.83 ಕೋಟಿ ರೂ.ಗೆ ವ್ಯಯಿಸಿದೆ. 2019-20 ರಲ್ಲಿಯೇ 5,326 ಪತ್ರಿಕೆಗಳಿಗೆ 295.05 ಕೋಟಿ ರೂ. 2021-22 ರಲ್ಲಿ, ಜಾಹೀರಾತು ಹಣವನ್ನು ಸ್ವೀಕರಿಸಿದ ಪತ್ರಿಕೆಗಳ ಸಂಖ್ಯೆ 6,224 ಕ್ಕೆ ಏರಿದೆ
2019 ರಿಂದ ಡಿಜಿಟಲ್ ಮಾಧ್ಯಮದಲ್ಲಿನ ಜಾಹೀರಾತುಗಳಿಗಾಗಿ 20.58 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಹಣವನ್ನು ಬ್ಯಾಂಕ್ ಮಾಡಿದ ಟಿವಿ ಚಾನೆಲ್ ಗಳು, ವೃತ್ತಪತ್ರಿಕೆಗಳು ಮತ್ತು ಡಿಜಿಟಲ್ ಪ್ಲಾಟ್ ಫಾರ್ಮ್ ಗಳ ಪಟ್ಟಿಯು ಜಾಹೀರಾತು ಮತ್ತು ದೃಶ್ಯ ಪ್ರಚಾರ ನಿರ್ದೇಶನಾಲಯದಲ್ಲಿ ಲಭ್ಯವಿದೆ