►ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಆಗಲಿ ಎಂಬುದು ಅಲ್ಪಸಂಖ್ಯಾತರ ಅಭಿಪ್ರಾಯ
ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಎಲ್ಲರೂ ಬಾಯಿ ಮುಚ್ಚಿಕೊಂಡು ಪಕ್ಷ ಕಟ್ಟುವ ಕೆಲಸ ಮಾಡಿ ಎಂದು ಹೇಳಿರುವುದು ನನ್ನೋಬ್ಬನಿಗೆ ಅಲ್ಲ. ಒಂದು ವೇಳೆ ಹೇಳಿದ್ದರೂ ಅವರು ದೊಡ್ಡವರು. ಅವರದೇ ದೊಡ್ಡದಾಗಲಿ ಬಿಡಿ ಎಂದು ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರಾದ್ದರಿಂದ ಆ ಹಕ್ಕು ಅವರಿಗೆ ಇದೆ. ವೈಯಕ್ತಿಕವಾಗಿ ನನಗೇ ಬಾಯಿ ಮುಚ್ಚು ಎಂದು ಹೇಳಿಲ್ಲ. ‘ಎಲ್ಲಕ್ಕಿಂತ ಮೊದಲು ಪಕ್ಷ. ಪಕ್ಷ ಕಟ್ಟಲು ಗಮನ ಕೊಡಿ ಎಂಬ ಕಾರಣಕ್ಕೆ ಶಿವಕುಮಾರ್ ಅವರು ಆ ರೀತಿ ಹೇಳಿರಬಹುದು. ನನ್ನ ಹೆಸರನ್ನು ಅವರು ಬಳಸಿಲ್ಲ’ ಎಂದು ಹೇಳಿದರು.
ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಆಗಲಿ ಎಂಬುದು ರಾಜ್ಯದ ಅಲ್ಪಸಂಖ್ಯಾತರ ಅಭಿಪ್ರಾಯ ಆಗಿದೆ. ಅದನ್ನೇ ನಾನು ಹೇಳಿದ್ದೇನೆ. ಕೊನೆಗೆ ನಮ್ಮ ಪಕ್ಷದ ಹೈಕಮಾಂಡ್ ಇದನ್ನು ನಿರ್ಧಾರ ಮಾಡುತ್ತದೆ. ನಾವು ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದರು.