ನನಗೆ ಮುಸ್ಲಿಮರ ಮತ ಬೇಡ ಎಂದ ಈಶ್ವರಪ್ಪ

Prasthutha|

ಬೆಂಗಳೂರು: ನನಗೆ ಮುಸ್ಲಿಮರ ಮತ ಬೇಡ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಘಂಟಾಘೋಷವಾಗಿ ಹೇಳಿದ್ದಾರೆ.

- Advertisement -

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಮುಸ್ಲಿಮರ ಮತ ಬೇಡ, ನನನ್ನು ಕುರುಬರು ಕೈ ಬಿಟ್ಟಿಲ್ಲ, ಬ್ರಾಹ್ಮಣರು ಕೈ ಬಿಟ್ಟಿಲ್ಲ, ಓಬಿಸಿ ಕೈ ಬಿಟ್ಟಿಲ್ಲ, ಆದರೆ ಮುಸ್ಲಿಮರು ಒಬ್ಬರೂ ವೋಟ್ ಹಾಕಿಲ್ಲ, ಅವರ ವೋಟ್ ನನಗೆ ಬೇಡ ಎಂದು ಹೇಳಿದ್ದಾರೆ.

ಬಿಜೆಪಿಯವರನ್ನು ಕೋಮುವಾದಿಗಳು ಎಂದು ಕರೆಯುತ್ತಾರೆ. ಭಾರತಾಂಬೆಯನ್ನು ಪೂಜಿಸುವ ಬಿಜೆಪಿ ಕೋಮುವಾದಿಯಾ? ಕಾಂಗ್ರೆಸ್ ನವರಿಗೆ ಮುಸ್ಲಿಮರ ವೋಟ್ ಬೆನ್ನ ಹಿಂದಿದೆ ಅನ್ನೋ ಭಾವನೆ ಇದೆ. ಹೇಗಾದರೂ ಮುಸ್ಲಿಮರ ವೋಟ್ ದುಡ್ಡು ಕೊಟ್ಟಾದರೂ ತಗೋಬಹುದು ಎನ್ನೋ ಭಾವನೆ ಇದೆ. ಈಗ ಅಂತಹ ಕಾಲ ಹೋಯ್ತು. ನರೇಂದ್ರ ಮೋದಿ ಶ್ರೀಕೃಷ್ಣನ ರೂಪದಲ್ಲಿ ಬಂದಿದ್ದಾರೆ ಎಂದು ಹೇಳಿದ್ದಾರೆ.



Join Whatsapp