ತಂದೆಯ ಲಾರಿಯಡಿಗೆ ಬಿದ್ದು ಪುಟ್ಟ ಮಗಳು ಸಾವು; ಮುಗಿಲು‌ ಮುಟ್ಟಿದ ತಂದೆಯ‌ ರೋಧನ

Prasthutha|

ಬೆಂಗಳೂರು: ತಂದೆ ವಾಹನ ರಿವರ್ಸ್ ತೆಗೆಯುವಾಗ ಆಕಸ್ಮಿಕವಾಗಿ ಒಂದೂವರೆ ವರ್ಷದ ಮಗಳು ಈಚರ್ ವಾಹನದಡಿ ಸಿಲುಕಿ ಮೃತಪಟ್ಟ ದಾರುಣ ಘಟನೆ ಸರ್ಜಾಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

- Advertisement -

ಮೃತ ಕಂದಮ್ಮ ಮನಿಶಾ ಆಟವಾಡುತ್ತಿದ್ದ ವೇಳೆ ತಂದೆ ಬಾಲಕೃಷ್ಣ  ತನ್ನ ಈಚರ್ ವಾಹನವನ್ನು ಮನೆ ಬಳಿ ರಿವರ್ಸ್ ತೆಗೆಯುವಾಗ ವಾಹನದಡಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಳು.

ಕೂಡಲೇ ಗಾಬರಿಗೊಂಡು ಗಾಡಿ ನಿಲ್ಲಿಸಿ ಓಡಿ ಬಂದ ಬಾಲಕೃಷ್ಣ   ಮಗುವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.  ಆದರೆ ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ.



Join Whatsapp