ಚಿಕ್ಕಬಳ್ಳಾಪುರ: ಬಿಜೆಪಿಯವರು ಕೆಟ್ಟವರು, ಹಿಟ್ಲರ್ ವಂಶಸ್ಥರು ಅವರು ಸರಿ ಇಲ್ಲ ಎಂದು ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಕಾಂಗ್ರೆಸ್ ವಕ್ತಾರೆ ಸೋನಿಯಾಗಾಂಧಿ ಇಡಿ ವಿಚಾರಣೆ ವಿರೋಧಿಸಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಳೆ ಬಿಜೆಪಿಯವರಿಗೆ ಒಳ್ಳೇ ಕೆಲಸ ಮಾಡಿ ಅಭ್ಯಾಸವಿಲ್ಲ. ಬೇರೆಯವರನ್ನು ಒಳ್ಳೆಯದು ಮಾಡೋದಕ್ಕೂ ಅವರು ಬಿಡೋದಿಲ್ಲ. ಬಿಜೆಪಿಯವರು ರಾಜ್ಯ ಹಾಗೂ ದೇಶದಲ್ಲಿ ವಾಮ ಮಾರ್ಗದಲ್ಲಿ ಅಧಿಕಾರಕ್ಕೆ ಬಂದವರು ಎಂದು ಹೇಳಿದ್ದಾರೆ.
ಈ ದೇಶದಲ್ಲಿ ಯಾವುದೇ ವಿರೋಧ ಪಕ್ಷ ಇರಬಾರದು ಎಂಬುದೇ ಬಿಜೆಪಿಯ ಕುತಂತ್ರ. ಸುಳ್ಳು ಪ್ರಕರಣ ದಾಖಲಿಸಿ ವಿಪಕ್ಷಗಳನ್ನು ಕುಗ್ಗಿಸುವ ಯತ್ನ ಮಾಡುತ್ತಿದ್ದಾರೆ. ಆಪರೇಷನ್ ಕಮಲ ಮಾಡಿ ಶಾಸಕರ ಖರೀದಿ ಮಾಡಿ ಅಧಿಕಾರ ಹಿಡಿದವರು ಬಿಜೆಪಿಯವರು. ಇಂತವರು ನೀತಿ ಮಾತುಗಳನ್ನು ಹೇಳಲು ಯೋಗ್ಯರಲ್ಲ ಎಂದು ಕಿಡಿಕಾರಿದ್ದಾರೆ.