‘ಸಂತೋಷ ಕೂಟ’ದ ಬಿಎಸ್ ವೈ ಮುಕ್ತ ಅಭಿಯಾನ ಕೊನೆಯ ಹಂತಕ್ಕೆ ಬಂದಿದೆ: ಕಾಂಗ್ರೆಸ್ ವ್ಯಂಗ್ಯ

Prasthutha|

- Advertisement -

ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಶಿಕಾರಿಪುರ ಕ್ಷೇತ್ರವನ್ನು ಮಗ ಬಿ.ವೈ. ವಿಜಯೇಂದ್ರ ಬಿಟ್ಟು ಕೊಡುವುದಾಗಿ ಘೋಷಿಸಿರುವ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ದ ವ್ಯಂಗ್ಯವಾಡಿದೆ. ‘ಸಂತೋಷ ಕೂಟ’ದ ’ಬಿಎಸ್ ವೈ ಮುಕ್ತ ಬಿಜೆಪಿ ’ಕೊನೆಯ ಹಂತಕ್ಕೆ ಬಂದಿದೆ ಲೇವಡಿ ಮಾಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ರಾಜ್ಯ ಘಟಕ , ” ಅಂತೂ ಇಂತೂ ‘ಸಂತೋಷ ಕೂಟ’ದ #BSYmuktaBJP ಅಭಿಯಾನ ಕೊನೆಯ ಹಂತಕ್ಕೆ ಬಂದಿದೆ!ಬಿ.ಎಸ್. ಯಡಿಯೂರಪ್ಪ ಅವರು ಪುತ್ರನಿಗೆ ಕ್ಷೇತ್ರ ಬಿಟ್ಟುಕೊಡುವ ಮಾತನಾಡುವ ಮೂಲಕ ಅಧಿಕಾರದಿಂದ ಇಳಿಯುವಾಗ ಅವರು ಹಾಕಿದ ಕಣ್ಣೀರಿನ ನೈಜ ಅರ್ಥ ಬಯಲಾಗಿದೆ. ಬಿಎಸ್ ವೈ ಅವರನ್ನು ಮೂಲೆಗುಂಪು ಮಾಡುವ ’ಬಿಎಸ್ ವೈ ಮುಕ್ತ ಬಿಜೆಪಿ ಪ್ರಯತ್ನ ಎದುರಿಸಲಾರದೆ ಅಸಹಾಯಕರಾಗಿ ಹಿಂದೆ ಸರಿದಿದ್ದಾರೆ ಎಂದು ಹೇಳಿದೆ.

- Advertisement -

ಸ್ವಕ್ಷೇತ್ರವನ್ನು ಮಗನಿಗೆ ಬಿಟ್ಟು ಬೆನ್ನಲ್ಲೇ ಬಿ.ಎಸ್. ಯಡಿಯೂರಪ್ಪ ಚುನಾವಣಾ ರಾಜಕೀಯದಿಂದಲೇ ನಿವೃತ್ತಿ ಹೊಂದಲಿದ್ದಾರಾ ಎಂಬ ಪ್ರಶ್ನೆ ರಾಜ್ಯ ರಾಜಕೀಯ ವಲಯದಲ್ಲಿ ಆರಂಭವಾಗಿದೆ.



Join Whatsapp