ಬಿಸಿಸಿಐಗೆ ʻಕೈ ಕೊಟ್ಟʼ ಪೇಟಿಎಂ, ಬೈಜೂಸ್ !

Prasthutha|

ಮುಂಬೈ: ಭಾರತೀಯ ಕ್ರಿಕೆಟ್‌ ಮಂಡಳಿ (ಬಿಸಿಸಿಐ) ಭಾರತದಲ್ಲಿ ಆಯೋಜಿಸುವ ಕ್ರಿಕೆಟ್‌ ಟೂರ್ನಿಗಳ ಟೈಟಲ್‌ ಪ್ರಾಯೋಜಕತ್ವ ಹೊಂದಿರುವ ಪೇಟಿಎಂ ಸಂಸ್ಥೆ, ಒಪ್ಪಂದದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದೆ. ತನ್ನ ಬಳಿಯಿರುವ ಟೈಟಲ್ ಪ್ರಾಯೋಜಕತ್ವ ಹಕ್ಕುಗಳನ್ನು ಮಾಸ್ಟರ್‌ಕಾರ್ಡ್‌ಗೆ ವರ್ಗಾಯಿಸುವಂತೆ ಪೇಟಿಎಂ, ಬಿಸಿಸಿಐಗೆ ಮನವಿ ಸಲ್ಲಿಸಿದೆ.

- Advertisement -

ಭಾರತದೊಳಗಿನ ಟೂರ್ನಿಗಳ ಟೈಟಲ್ ಪ್ರಾಯೋಜಕತ್ವ ಹಕ್ಕುಗಳಿಗಾಗಿ ಬಿಸಿಸಿಐನೊಂದಿಗೆ 2019ರಲ್ಲಿ ಪೇಟಿಎಂ ಮಾಡಿಕೊಂಡಿರುವ ಒಪ್ಪಂದ, 2023ರ ಮಾರ್ಚ್ 31ಕ್ಕೆ ಮುಕ್ತಾಯವಾಗಲಿದೆ. ಆದರೆ ಇದೀಗ ಪ್ರಾಯೋಜಕತ್ವದಿಂದ ಹಿಂದೆ ಸರಿಯಲು ಪೇಟಿಎಂ ನಿರ್ಧರಿಸಿದೆ. ಕಂಪನಿಯ ಮನವಿಗೆ  ಅನುಮೋದನೆ ನೀಡಲು ಮುಂಬೈನಲ್ಲಿ ನಡೆದ ಬಿಸಿಸಿಐ ಅಪೆಕ್ಸ್‌ ಕೌನ್ಸಿಲ್ ಸಭೆಯಲ್ಲಿ ನಿರ್ಧರಿಸಲಾಗಿದೆ.

ಮತ್ತೊಂದೆಡೆ ಟೀಮ್‌ ಇಂಡಿಯಾದ ಜೆರ್ಸಿ ಪ್ರಾಯೋಜಕರಾಗಿರುವ ಬೈಜುಸ್ ಸಂಸ್ಥೆಯು ಬಿಸಿಸಿಐಗೆ ₹ 86.21 ಕೋಟಿ ಬಾಕಿ ಪಾವತಿಸಸಲು ಬಾಕಿ ಇದ್ದು, ಈ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ. 2023ರ ಏಕದಿನ ವಿಶ್ವಕಪ್ ಟೂರ್ನಿಯ ಮುಕ್ತಾಯದವರೆಗೂ ಸಂಸ್ಥೆಯು ಬೈಜುಸ್,  ಟೀಮ್‌ ಇಂಡಿಯಾದ ಜೆರ್ಸಿ ಪ್ರಾಯೋಜಕತ್ವವನ್ನು ಹೊಂದಿದೆ. ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ಬೈಜೂಸ್‌ ಸಂಸ್ಥೆಯ ಅಧಿಕಾರಿಗಳು,  ಒಪ್ಪಂದಗಳಿಗೆ ಸಹಿ ಹಾಕುವ ಕಾರ್ಯ ಬಾಕಿಯಿದೆ. ಅದಾದ ನಂತರ ಪ್ರಕಾರ ಹಣ ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ.



Join Whatsapp