ಅಮಾಯಕ ಯುವಕನ ಮೇಲೆ ಸುಳ್ಳಾರೋಪ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲು SKSSF ಕೊಡಗು ಜಿಲ್ಲಾ ಸಮಿತಿ ಒತ್ತಾಯ

Prasthutha|

ಕೊಡಗು: ಕೊಡವ ಹೆಣ್ಣು ಮಕ್ಕಳನ್ನು ಹಾಗೂ ದೇವತೆಯನ್ನು ಅವಹೇಳನ ಮಾಡಿದ ಪ್ರಕರಣದಲ್ಲಿ ಅಮಾಯಕ ಯುವಕನೊಬ್ಬನ ಮೇಲೆ ಸುಳ್ಳಾರೋಪ ನಡೆಸಿ ತೇಜೋವಧೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು SKSSF ಕೊಡಗು ಜಿಲ್ಲಾ ಸಮಿತಿ ತ್ತಾಯಿಸಿದೆ.

- Advertisement -

ಘಟನೆಯ ನೈಜ ಆರೋಪಿಯನ್ನು ಬಂಧಿಸಿ ಶಾಂತಿ ಕಾಪಾಡುವಲ್ಲಿ ಯಶಸ್ವಿಯಾದ ಪೋಲಿಸ್ ಅಧಿಕಾರಿಗಳ ಕಾರ್ಯವನ್ನು SKSSF ಜಿಲ್ಲಾ ಸಮಿತಿಯು ಅಭಿನಂಧಿಸಿದೆ.

ಅನ್ಯೋನ್ಯತೆಯಿಂದ ಬಾಳುತ್ತಿರುವ ಕೊಡವರು ಮತ್ತು ಮುಸ್ಲಿಮರ ನಡುವೆ ಸಂಘರ್ಷ ಸೃಷ್ಟಿಸಿ ಕೊಡಗಿನ ಶಾಂತಿಯುತ ವಾತಾವರಣವನ್ನು ಕೆಡಿಸಲು ವ್ಯವಸ್ಥಿತವಾದ ಷಡ್ಯಂತ್ರ ನಡೆದಿದೆ. ಘಟನೆಯ ಆರೋಪಿ ದಿವಿನ್ ದೇವಯ್ಯ ಮಾತ್ರ ಆಗಿರಲು ಸಾಧ್ಯವಿಲ್ಲ. ಉನ್ನತ ಮಟ್ಟದ ತನಿಖೆ ನಡೆಸಿ ಆತನಿಗೆ ಕುಮ್ಮಕ್ಕು ನೀಡಿದ ಮತ್ತು ಆತನೊಂದಿಗೆ ಶಾಮೀಲಾಗಿರುವ  ಕಿಡಿಗೇಡಿಗಳನ್ನು ಸಹ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಬೇಕಿದೆ ಎಂದು ಒತ್ತಾಯಿಸಿದೆ.

- Advertisement -

ಅಮಾಯಕ ಯುವಕನ ಭಾವಚಿತ್ರ ಬಳಸಿ ಸುಳ್ಳು ಆರೋಪವನ್ನು ಮಾಡಿ ಉಗ್ರ ಪಟ್ಟ ಕಟ್ಟಿ ಯುವಕನಿಗೆ ಮಾನಸಿಕ ಕಿರುಕುಳ ನೀಡಿದವರ ವಿರುದ್ಧ ಯುವಕನ ತಂದೆ ದೂರು ದಾಖಲಿಸಿದರೂ ಕೂಡ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕೂಡಲೇ ಆ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಾಗೂ ಸಮಾಜದಲ್ಲಿ ಒಡಕುಂಟುಮಾಡುವ  ‘ಕೊಡವ ಹೊಲಿಕ್ಸ್ ‘ ಎಂಬ ಇನ್ಸ್ಟಾಗ್ರಾಂ ಖಾತೆಯ ಹಿಂದಿನ ಕಾಣದ ಕೈಗಳನ್ನು ಪತ್ತೆ ಹಚ್ಚಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು SKSSF ಕೊಡಗು ಜಿಲ್ಲಾ ಸಮಿತಿಯು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದೆ.



Join Whatsapp