ಹೊಸದಿಲ್ಲಿ: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿಯ ಮಗಳ ವಿರುದ್ಧ ದೂರು ದಾಖಲಾಗಿದೆ.
ಸ್ಮೃತಿ ಇರಾನಿ ಅವರ ಮಗಳು ಝೋಯ್ಶ್ ಇರಾನಿ ಗೋವಾದಲ್ಲಿ ಸತ್ತ ವ್ಯಕ್ತಿಯ ಹೆಸರಿನಲ್ಲಿ ಅಕ್ರಮ ಬಾರ್ ಲೈಸೆನ್ಸ್ ಪಡೆದಿದ್ದಾರೆ ಎಂದು ದೂರು ದಾಖಲಾಗಿದೆ. ಮಾಹಿತಿ ಹಕ್ಕು ಕಾಯ್ದೆ ಕಾರ್ಯಕರ್ತ ಆ್ಯಂಟನಿ ರೊಡ್ರಿಗಸ್ ಆರ್ ಟಿ ಐ ಅರ್ಜಿಯಲ್ಲಿ ಪಡೆದ ಮಾಹಿತಿಯ ಆಧಾರದ ಮೇಲೆ ದೂರು ದಾಖಲಿಸಿದ್ದಾರೆ.
ದೂರಿನ ಬಳಿಕ ಅಬಕಾರಿ ಇಲಾಖೆ ಝೋಯ್ಶ್ ಇರಾನಿ ಒಡೆತನದ ಸಿಲ್ಲಿ ಸೋಲ್ಸ್ ಕೆಫೆ ಮತ್ತು ಬಾರ್ ವಿರುದ್ಧ ನೋಟಿಸ್ ಜಾರಿ ಮಾಡಿದೆ. ಸಚಿವೆ ಪುತ್ರಿಯ ಬಾರ್ ಉತ್ತರ ಗೋವಾದಲ್ಲಿದೆ.