ಯುವತಿಯ ಮೇಲೆ ಆ್ಯಸಿಡ್ ದಾಳಿ; ಆರೋಪಿ ನಾಗೇಶ್ ವಿರುದ್ಧ 300 ಪುಟಗಳ ಚಾರ್ಜ್‍ಶೀಟ್

Prasthutha|

ಬೆಂಗಳೂರು: ಯುವತಿಯ ಮೇಲೆ ಆ್ಯಸಿಡ್ ಎರಚಿದ್ದ ವಿಕೃತ ಪ್ರೇಮಿ ನಾಗೇಶ್‍ನ ವಿರುದ್ಧ ನ್ಯಾಯಾಲಯಕ್ಕೆ ಸಲ್ಲಿಸಲು 300 ಪುಟಗಳ ಆರೋಪಪಟ್ಟಿಯನ್ನು ಸಿದ್ಧಪಡಿಸಿದ್ದಾರೆ.

- Advertisement -

ಸುಂಕದಕಟ್ಟೆಯಿಂದ ಪರಾರಿಯಾಗಿ ಆರೋಪಿ ಉಳಿದುಕೊಂಡಿದ್ದ ತಿರುವಣ್ಣಮಲೈ ಸೇರಿದಂತೆ 13 ಕಡೆಗಳಲ್ಲಿ ಮಹಜರು ಮಾಡಿರುವುದನ್ನು ಚಾರ್ಜ್‍ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

ಪ್ರಾಥಮಿಕ ಆರೋಪ ಪಟ್ಟಿಯಲ್ಲಿ 60 ಸಾಕ್ಷಿಗಳ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಹತ್ತು ಪುಟಗಳಲ್ಲಿ ಆರೋಪಿಯ ತಪ್ಪೊಪ್ಪಿಗೆ ಹೇಳಿಕೆ ಪಡೆಯಲಾಗಿದೆ. ಯುವತಿಗೆ ಹಾಕಿದ ಆ್ಯಸಿಡ್ ಸೆಲ್ಪೂರಿಕ್ ಆ್ಯಸಿಡ್ ಎನ್ನುವುದು ಎಫ್‍ಎಸ್‍ಎಲ್ ವರದಿಯಿಂದ ಗೊತ್ತಾಗಿದೆ.

- Advertisement -

ಯುವತಿಯ ಬಟ್ಟೆ ಮೇಲೆ ಬಿದ್ದಿದ್ದ ಆ್ಯಸಿಡ್, ಕೂದಲು, ಚರ್ಮ ಎಲ್ಲದರ ಎಫ್‍ಎಸ್‍ಎಲ್ ವರದಿಯಲ್ಲಿ ಸಲ್ಫೂರಿಕ್ ಎಂಬುದು ದೃಢವಾಗಿದೆ. ಬರೋಬ್ಬರಿ ಒಂಭತ್ತು ಲೀಟರ್ ಆ್ಯಸಿಡ್ ಖರೀದಿಸಿದ್ದ ಆರೋಪಿಯು, ಅರ್ಧ ಲೀಟರ್ ಯುವತಿ ಮೇಲೆ ಎರಚಿ ಉಳಿದರ್ಧ ಲೀಟರ್ ಬಿಸಾಕಿದ್ದ. 8 ಲೀಟರ್ ಆ್ಯಸಿಡ್ ಅನ್ನು ಜಪ್ತಿ ಮಾಡಲಾಗಿದೆ.

ಸಿಸಿಟಿವಿ ದೃಶ್ಯಾವಳಿಗಳು ಫೋನ್ ಕರೆ ಸೇರಿದಂತೆ ಬಲವಾದ ತಾಂತ್ರಿಕ ಸಾಕ್ಷಿಗಳನ್ನು ಸಂಗ್ರಹಿಸಲಾಗಿದೆ. ಇನ್ನು ಯುವತಿ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ನ್ಯಾಯಾಧೀಶರ ಸಮ್ಮುಖದಲ್ಲಿ 164 ಹೇಳಿಕೆ ದಾಖಲಿಸಬೇಕಿದೆ. ಆ ಬಳಿಕ ಚಾರ್ಜ್‍ಶೀಟ್ ಸಲ್ಲಿಕೆಯಾಗಲಿದೆ.



Join Whatsapp